Publish Date: Wed, 06 Jul 2022 (10:50 IST)
Updated Date: Wed, 06 Jul 2022 (11:01 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಟೀಂ ಇಂಡಿಯಾಗೆ ದಂಡದ ಶಿಕ್ಷೆಯೂ ಸಿಕ್ಕಿದೆ.
ನಿಧಾನಗತಿಯ ಓವರ್ ಮಾಡಿದ್ದಕ್ಕೆ ಜಸ್ಪ್ರೀತ್ ಬುಮ್ರಾ ತಂಡಕ್ಕೆ ದಂಡ ವಿಧಿಸಲಾಗಿದೆ. ನಿಗದಿತ ಸಮಯಕ್ಕೆ ಓವರ್ ಪೂರ್ತಿ ಮಾಡದೇ ಇದ್ದ ಕಾರಣಕ್ಕೆ ಟೀಂ ಇಂಡಿಯಾಗೆ ಪಂದ್ಯದ ಶುಲ್ಕದ ಶೇ.40 ರಷ್ಟು ದಂಡ ವಿಧಿಸಲಾಗಿದೆ.
ಎರಡೂ ಇನಿಂಗ್ಸ್ ನಲ್ಲಿ ಅವಧಿಗಿಂತ ಹೆಚ್ಚು ಸಮಯ ಓವರ್ ಮಾಡಲು ತೆಗೆದುಕೊಂಡಿದ್ದಕ್ಕೆ ತಂಡಕ್ಕೆ ಶೇ.40 ರಷ್ಟು ಸಂಭಾವನೆ ಕಡಿತದ ಶಿಕ್ಷೆ ನೀಡಲಾಗಿದೆ.