Publish Date: Wed, 06 Jul 2022 (08:20 IST)
Updated Date: Wed, 06 Jul 2022 (11:40 IST)
rಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಒಂದು ಪಂದ್ಯದಲ್ಲಿ 11 ಮಂದಿ ಆಡುತ್ತಾರೆ. ಆದರೆ ಟೀಂ ಇಂಡಿಯಾ ಪರ ಈ ಪಂದ್ಯದಲ್ಲಿ ಆಡಿದ್ದು ಕೇವಲ ಐದು ಆಟಗಾರರು. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು.
ನಾಯಕ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮೊಹಮ್ಮದ್ ಸಿರಾಜ್ ಮೊದಲ ಇನಿಂಗ್ಸ್ ನಲ್ಲಿ ಮಿಂಚಿದ್ದರು. ಚೇತೇಶ್ವರ ಪೂಜಾರ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡಿದರೆ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಆಟವಾಡಿದ್ದು ರಿಷಬ್ ಪಂತ್ ಮಾತ್ರ. ಉಳಿದಂತೆ ಕೊಹ್ಲಿ, ಶುಬ್ನಂ ಗಿಲ್, ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಲೆಕ್ಕ ಭರ್ತಿಗೆ ಮಾತ್ರ ಇದ್ದರು ಎನ್ನಬಹುದು. ಹೀಗಾಗಿ ಈ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.