Select Your Language

Notifications

webdunia
webdunia
webdunia
webdunia

ದುಡ್ಡಿಲ್ಲದೇ ಪರದಾಡುತ್ತಿದ್ದಾರೆ ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್

ದುಡ್ಡಿಲ್ಲದೇ ಪರದಾಡುತ್ತಿದ್ದಾರೆ ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್
ಸಿಡ್ನಿ , ಶುಕ್ರವಾರ, 27 ಅಕ್ಟೋಬರ್ 2023 (16:35 IST)
ಸಿಡ್ನಿ: ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್ ಈಗ ಹಣಕಾಸಿನ ಸಂಕಷ್ಟದಲ್ಲಿದ್ದಾರೆ!

ಟೀಂ ಇಂಡಿಯಾದ ವಿವಾದಿತ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ದುಡ್ಡಿಲ್ಲದೇ ಪರದಾಡುತ್ತಿದ್ದು, ಅವರ ಸ್ನೇಹಿತರು ಯಾರಾದರೂ ಹಣಕಾಸಿನ ಸಹಾಯ ಮಾಡಿ ಎಂದು ಆನ್ ಲೈನ್ ಮೂಲಕ ಚಂದಾ ಪಡೆಯಲು ಮುಂದಾಗಿದ್ದಾರೆ.

75 ವರ್ಷದ ಗ್ರೆಗ್ ಚಾಪೆಲ್ 2005-2007 ರವರೆಗೆ ಟೀಂ ಇಂಡಿಯಾ ಕೋಚ್ ಆಗಿದ್ದರು. ಅವರು ಕೋಚ್ ಆಗಿದ್ದಾಗ ಗಂಗೂಲಿಯನ್ನು ತಂಡದಿಂದ ಹೊರಹಾಕಿದ್ದರು. ಇತರ ಆಟಗಾರರೂ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅವರು ಜೀವನೋಪಾಯಕ್ಕಾಗಿ ಹಣಕಾಸಿನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಗಮನ ಸೆಳೆದ ವಿರಾಟ್ ಕೊಹ್ಲಿ