Daily Horoscope
✕

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಮುಳುಗುತ್ತಿದ್ದ ಟೀಂ ಇಂಡಿಯಾಗೆ ಕೊಹ್ಲಿಯೇ ಆಧಾರ

Webdunia
ಗುರುವಾರ, 17 ಡಿಸೆಂಬರ್ 2020 (17:10 IST)
ಅಡಿಲೇಡ್: ಮೊದಲ ಓವರ್ ನಲ್ಲೇ ವಿಕೆಟ್ ಬಿದ್ದ ಮೇಲೆ ತಡಬಡಾಯಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಗೆ ಬಲ ತುಂಬಿದ್ದು ವಿರಾಟ್ ಕೊಹ್ಲಿ. ಇವರಿಗೆ ಸಾಥ್ ನೀಡಿದ್ದು ಉಪನಾಯಕ ಅಜಿಂಕ್ಯಾ ರೆಹಾನೆ. ಇವರಿಬ್ಬರ ಆಟದಿಂದಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ.

 

ದಿನದಂತ್ಯಕ್ಕೆ ರವಿಚಂದ್ರನ್ ಅಶ್ವಿನ್ 15 ಮತ್ತು ವೃದ್ಧಿಮಾನ್ ಸಹಾ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಬಳಿಕ ಮಯಾಂಕ್-ಚೇತೇಶ್ವರ ಪೂಜಾರ ಕೆಲ ಹೊತ್ತು ಆಡಿದರೂ ಮಯಾಂಕ್ 17 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಚೇತೇಶ್ವರ ಪೂಜಾರ ಅಪ್ಪಟ ಟೆಸ್ಟ್ ಶೈಲಿಯ ಇನಿಂಗ್ಸ್ ಆಡಿ 160 ಎಸೆತಗಳಿಂದ 43 ರನ್ ಗಳಿಸಿ ಔಟಾದರು. ಇದರ ನಡುವೆ ನಾಯಕನ ಆಟವಾಡಿದ ಕೊಹ್ಲಿ 180 ಎಸೆತಗಳಿಂದ 74 ರನ್ ಗಳಿಸಿ ತಂಡದ ಮೊತ್ತ ಚಾಲೂ ಆಗಿರುವಂತೆ ನೋಡಿಕೊಂಡರು. ಇವರಿಗೆ ಸಾಥ್ ನೀಡಿದ ಉಪ ನಾಯಕ ರೆಹಾನೆ 42 ರನ್ ಗಳಿಸಿ ಔಟಾದರು. ಕೊಹ್ಲಿ ಅರ್ಧಶತಕ ಗಳಿಸಿದ್ದು, ಬಿಟ್ಟರೆ ಉಳಿದವರಿಂದ ದೊಡ್ಡ ಮೊತ್ತದ ಇನಿಂಗ್ಸ್ ಬರಲೇ ಇಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಗಾಯವಾಗಿರುವ ಇಶಾನ್ ಕಿಶನ್ ಗೆ ಸಂಜು ಸ್ಯಾಮ್ಸನ್ ಎತ್ತಲು ಸಾಧ್ಯವಾಗಿದ್ದು ಹೇಗೆ: ನೆಟ್ಟಿಗನ ಪ್ರಶ್ನೆ

ಮುಂದಿನ ಸುದ್ದಿ
Show comments