Publish Date: Thu, 17 Dec 2020 (09:10 IST)
Updated Date: Thu, 17 Dec 2020 (09:12 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಈ ಪಂದ್ಯದ ಆಡುವ ಬಳಗವನ್ನು ಟೀಂ ಇಂಡಿಯಾ ನಿನ್ನೆಯೇ ಪ್ರಕಟಿಸಿತ್ತು. ಅದರಂತೆ ಮಯಾಂಕ್ ಅಗರ್ವಾಲ್ ಜತೆಗೆ ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಇದುವರೆಗೆ 26 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು 21 ಬಾರಿ ಪಂದ್ಯ ಗೆದ್ದಿತ್ತು. ವಿಶೇಷವೆಂದರೆ ಇದುವರೆಗೆ ಕೊಹ್ಲಿ ನಾಯಕತ್ವದಲ್ಲಿ ಟಾಸ್ ಗೆದ್ದು ಟೀಂ ಇಂಡಿಯಾ ಟೆಸ್ಟ್ ಪಂದ್ಯ ಸೋತಿದ್ದಿಲ್ಲ.