Webdunia - Bharat's app for daily news and videos

Install App

ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ: ರಿಷಬ್ ಪಂತ್ ಗಾಗಿ ಹೊಸ ಹಾಡು ಬರೆದ ಅಭಿಮಾನಿಗಳು!

Webdunia
ಶುಕ್ರವಾರ, 4 ಜನವರಿ 2019 (12:44 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.


ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿದೆ. ಆಸೀಸ್ ಪರ ಉಸ್ಮಾನ್ ಖವಾಜ 5 ಮತ್ತು ಮಾರ್ಕಸ್ ಹ್ಯಾರಿಸ್ 19 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇದಕ್ಕೂ ಮೊದಲು ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‍ ಮನ್ ರಿಷಬ್ ಪಂತ್ ಭರ್ಜರಿ ಶತಕ ಗಳಿಸಿದ್ದು, 159 ರನ್ ಗಳಿಸಿ ಅಜೇಯರಾಗುಳಿದರು. ರವೀಂದ್ರ ಜಡೇಜಾ 81 ರನ್ ಗೆ ಔಟಾದಾಗ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಇನ್ನು, ರಿಷಬ್ ಪಂತ್ ಭರ್ಜರಿ ಇನಿಂಗ್ಸ್ ನೋಡಿ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಹೊಸ ಹಾಡೊಂದನ್ನು ಬರೆದಿದೆ. ಈ ಸರಣಿಯಲ್ಲಿ ರಿಷಬ್ ಪಂತ್ ರನ್ನು ಬೇಬಿ ಸಿಟ್ಟಿಂಗ್ ಮಾಡಲು ಲಾಯಕ್ಕು ಎಂದು ಆಸೀಸ್ ನಾಯಕ ಟಿಮ್ ಪೇಯ್ನ್ ಸ್ಲೆಡ್ಜಿಂಗ್ ಮಾಡಿದ್ದರು.

ಅದಕ್ಕೀಗ ಭಾರತೀಯ ಅಭಿಮಾನಿಗಳು ಹಾಡಿನ ಮೂಲಕ ತಿರುಗೇಟು ಕೊಟ್ಟಿದ್ದಾರೆ. ರಿಷಬ್  ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ, ಸಿಕ್ಸರ್ ಕೂಡಾ ಸಿಡಿಸುತ್ತಾರೆ ಎಂಬರ್ಥದ ಹಾಡಿನ ಸಾಲನ್ನು ಅಭಿಮಾನಿಗಳು ಮೈದಾನದಲ್ಲಿ ಹಾಡಿ ರಿಷಬ್ ಪರ ಜೈಕಾರ ಹಾಕಿದ್ದು ಇಂದಿನ ದಿನದ ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments