ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಆಡಲಿರುವ ಟೀಂ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ.
ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅಲಭ್ಯರಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಬೇಕಾಗುತ್ತದೆ. ಅವರು ಓಪನಿಂಗ್ ಸ್ಥಾನಕ್ಕೆ ಸೂಕ್ತ ಬ್ಯಾಟಿಗ. ಹೀಗಾಗಿ ನಾಯಕ ರೋಹಿತ್ ಸ್ವತಃ ತಮ್ಮ ಆರಂಭಿಕ ಸ್ಥಾನವನ್ನೇ ಅವರಿಗೆ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.
ಆಲೂರಿನಲ್ಲಿ ನಡೆದ ಅಭ್ಯಾಸದ ವೇಳೆ ರೋಹಿತ್ ಮಧ‍್ಯಮ ಕ್ರಮಾಂಕದ ಬ್ಯಾಟಿಗರೊಂದಿಗೆ ಅಭ್ಯಾಸ ನಡೆಸಿದ್ದು ಇದಕ್ಕೆ ಸಾಕ್ಷಿ. ಹೀಗಾಗಿ ಹಿಟ್ ಮ್ಯಾನ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಉಳಿದ ಬ್ಯಾಟಿಗರ ಸ್ಥಾನ ಯಥಾ ಪ್ರಕಾರವಿರಲಿದೆ.