ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ 2023 ಗೆ ಇಂದು ಚಾಲನೆ ಸಿಗುತ್ತಿದ್ದು, ಇದಕ್ಕೂ ಮೊದಲು ಟೀಂ ಇಂಡಿಯಾಗೆ ನಿರೀಕ್ಷಿತ ಸಂಕಷ್ಟವೊಂದು ಎದುರಾಗಿದೆ.
ಸಂಪೂರ್ಣ ಫಿಟ್ ಆಗದ ವಿಕೆಟ್ ಕೀಪರ್ ಬ್ಯಾಟಿಗ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯ ಮತ್ತು 4 ರಂದು ನಡೆಯಲಿರುವ ನೇಪಾಳ ವಿರುದ್ಧದ ಪಂದ್ಯಕ್ಕೆ ರಾಹುಲ್ ಅಲಭ್ಯರಾಗಿದ್ದಾರೆ.
ಇದು ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ರಾಹುಲ್ ಅಲಭ್ಯರಾಗಿರುವುದರಿಂದ ತಂಡದ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಕಣಕ್ಕಿಳಿಯಬಹುದು. ಆದರೆ ಅವರು ಆರಂಭಿಕ ಸ್ಥಾನಕ್ಕೆ ಹೇಳಿ ಮಾಡಿಸಿದ ಬ್ಯಾಟಿಗ. ಟೆಸ್ಟ್ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಆಡಿ ರನ್ ಗಳಿಸಿದ್ದಾರೆ. ಆದರೆ ಕಿರು ಮಾದರಿಯಲ್ಲಿ ಅವರಿಗೆ ಕೆಳ ಕ್ರಮಾಂಕದಲ್ಲಿ ಅಷ್ಟು ರನ್ ಗಳಿಸಿಲ್ಲ. ಹೀಗಾದಲ್ಲಿ ಶುಬ್ನಲ್ ಗಿಲ್ ತಮ್ಮ ಆರಂಭಿಕ ಸ್ಥಾನ ಬಿಟ್ಟುಕೊಡಬೇಕಾದೀತು. ಒಂದು ವೇಳೆ ಗಿಲ್ ಆರಂಭಿಕರಾಗಿಯೇ ಕಣಕ್ಕಿಳಿದರೆ ಇಶಾನ್ ಕೆಳ ಕ್ರಮಾಂಕಕ್ಕೆ ಜಾರಬೇಕಾದೀತು. ಹಾಗಾದಲ್ಲಿ ಅವರು ಕ್ಲಿಕ್ ಆಗಬಹುದೇ ಎನ್ನುವ ಆತಂಕವಿದೆ. ಒಟ್ಟಿನಲ್ಲಿ ರಾಹುಲ್ ಅಲಭ್ಯತೆ ತಂಡದ ಬ್ಯಾಟಿಂಗ್ ಕ್ರಮಾಂಕಕ್ಕೂ ಸಮಸ್ಯೆಯಾಗಿ ಕಾಡಬಹುದು.