ಕೊಲೊಂಬೋ: ಇಂದಿನಿಂದ ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ 2023 ಟೂರ್ನಿ ಆರಂಭವಾಗಲಿದೆ. ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಕೂಟ ನಡೆಯಲಿದೆ.
ಭಾರತವಾಡುವ ಎಲ್ಲಾ ಪಂದ್ಯಗಳೂ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಕೂಟದಲ್ಲಿ ಪಾಕಿಸ್ತಾನ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗಿಯಾಗುತ್ತಿವೆ. ಕಳೆದ ಬಾರಿ ಶ್ರೀಲಂಕಾ ಚಾಂಪಿಯನ್ ಆಗಿತ್ತು.
ಕೂಟದ ಮೊದಲ ಪಂದ್ಯ ಇಂದು ಪಾಕಿಸ್ತಾನದ ಮುಲ್ತಾನ್ ನಲ್ಲಿ ಪಾಕ್ ಮತ್ತು ನೇಪಾಳ ನಡುವೆ ನಡೆಯಲಿದೆ. ಭಾರತ ಸೆಪ್ಟೆಂಬರ್ 2 ರಂದು ಮೊದಲ ಪಂದ್ಯವಾಡಲಿದೆ. ಸೆಪ್ಟೆಂಬರ್ 17 ರಂದು ಫೈನಲ್ ಪಂದ್ಯ ನಡೆಯುವುದು.