Webdunia - Bharat's app for daily news and videos

Install App

TATA WPL 2025: ಆರ್ ಸಿಬಿಯ ಗ್ರೈಂಡ್ ಮಾಡಿದ ಗಾರ್ಡನರ್, ಗೆಲುವಿಗೆ ಬೃಹತ್ ಗುರಿ

Krishnaveni K
ಶುಕ್ರವಾರ, 14 ಫೆಬ್ರವರಿ 2025 (21:11 IST)
Photo Credit: X
ವಡೋದರಾ: ಡಬ್ಲ್ಯುಪಿಎಲ್ 3 ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ ಸಿಬಿ ವಿರುದ್ಧ ಅತಿಥೇಯ ಗುಜರಾತ್ ಜೈಂಟ್ಸ್ 201 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿದೆ. ಆರ್ ಸಿಬಿಯನ್ನು ಗುಜರಾತ್ ಕ್ಯಾಪ್ಟನ್ ಆಶ್ಲೇ ಗಾರ್ಡನರ್ ಅಕ್ಷರಶಃ ಗ್ರೈಂಡ್ ಮಾಡಿದರು.

ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೇ ಮೊದಲ 10 ಓವರ್ ಗಳಲ್ಲಿ ಆರ್ ಸಿಬಿ ಬೌಲರ್ ಗಳು ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಶ್ಲೇ ಗಾರ್ಡನರ್ ಮೈದಾನಕ್ಕಿಳಿದ ಮೇಲೆ ಗುಜರಾತ್ ಬ್ಯಾಟಿಂಗ್ ಗೇರ್ ಬದಲಾಯಿಸಿಕೊಂಡಿತು.

ಒಟ್ಟು 37 ಎಸೆತ ಎದುರಿಸಿದ ಗಾರ್ಡನರ್ 8 ಸಿಕ್ಸರ್ ಗಳ ನೆರವಿನಿಂದ ಅಜೇಯ 79 ರನ್ ಚಚ್ಚಿದರು. ಅವರ ಬೀಡು ಬೀಸಾದ ಇನಿಂಗ್ಸ್ ನಿಂದಾಗಿ ಗುಜರಾತ್ 15 ಓವರ್ ಗಳಲ್ಲೇ 139 ರನ್ ಗಳನ್ನು ದಾಟಿತ್ತು. ಗಾರ್ಡನರ್ ಅಬ್ಬರಕ್ಕೆ ಆರ್ ಸಿಬಿ ಬೌಲರ್ ಗಳು ಒತ್ತಡಕ್ಕೊಳಗಾದರು.

ಇದಕ್ಕೆ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಬೆತ್ ಮೂನಿ 56 ರನ್ ಸಿಡಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆರ್ ಸಿಬಿ ಪರ ರೇಣುಕಾ ಸಿಂಗ್ 2, ಕನಿಕಾ ಅಹುಜಾ, ಗಾರ್ಜ್ ವಾರೆಹಾಮ್, ಪ್ರೇಮಾ ರಾವತ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments