Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ 2024: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲ್ಲಲು ಕಾರಣವಾದ ಪ್ರಮುಖ ಅಂಶ

Team India vs Pakistan

Krishnaveni K

ನ್ಯೂಯಾರ್ಕ್ , ಸೋಮವಾರ, 10 ಜೂನ್ 2024 (08:46 IST)
Photo Credit: X
ನ್ಯೂಯಾರ್ಕ್:  ಟಿ20 ವಿಶ್ವಕಪ್ 2024 ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ರನ್ ಗಳಿಂದ ನಂಬಲಸಾಧ್ಯ ಗೆಲುವು ಸಾಧಿಸಿದೆ. ಇದಕ್ಕೆ ಕಾರಣವಾದ ಅಂಶಗಳೇನು ನೋಡೋಣ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್ ಗಳಲ್ಲಿ 119 ರನ್ ಗಳಿಗೆ ಆಲೌಟ್ ಆಗಿತ್ತು. ಒಂದು ಹಂತದಲ್ಲಿ  89 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಬಳಿಕ 119 ರನ್ ಗಳಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತ್ತು. ಭಾರತ ಬ್ಯಾಟಿಗರ ಕಳಪೆ ಹೊಡೆತಗಳೇ ಈ ಕುಸಿತಕ್ಕೆ ಕಾರಣವಾಯಿತು. ಪಾಕಿಸ್ತಾನ ಪರ ಶಾಹಿನ್ ಅಫ್ರಿದಿ 1, ನಸೀಂ ಶಾ 3, ಮೊಹಮ್ಮದ್ ಅಮೀರ್ 2, ಹ್ಯಾರಿಸ್ ರೌಫ್ 3 ವಿಕೆಟ್ ಕಬಳಿಸಿದರು. ಭಾರತದ ಪರ ರಿಷಬ್ ಪಂತ್ ಎಂದಿನಂತೇ ಹೊಡೆಬಡಿಯ ಇನಿಂಗ್ಸ್ ಆಡಿದ 42 ರನ್ ಗಳಿಸಿದರೆ ಅಕ್ಸರ್ ಪಟೇಲ್ 20 ರನ್ ಗಳ ಕೊಡುಗೆ ನೀಡಿದರು. ರೋಹಿತ್ 13, ಕೊಹ್ಲಿ 1, ಸೂರ್ಯಕುಮಾರ್ 7, ಹಾರ್ದಿಕ್ ಪಾಂಡ್ಯ 7, ರವೀಂದ್ರ ಜಡೇಜಾ ತಲಾ 0, ಅರ್ಷ್ ದೀಪ್ ಸಿಂಗ್ 9 ರನ್ ಗಳಿಸಿದರು.

ಈ ಮೊತ್ತ ನೋಡಿದ ಬಳಿಕ ಪಾಕ್ ಸುಲಭವಾಗಿ ಗುರಿ ಬೆನ್ನತ್ತಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಯಾಕೆಂದರೆ ಇದುವರೆಗೆ ನ್ಯೂಯಾರ್ಕ್ ನಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಅಲ್ಪ ಮೊತ್ತಕ್ಕೆ ಕುಸಿದರೆ ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ ತಂಡ ಸುಲಭವಾಗಿ ಪಂದ್ಯ ಗೆದ್ದಿತ್ತು.

ಆದರೆ ಭಾರತ ತನ್ನ ಅನುಭವಿ ಬೌಲರ್ ಗಳ ಸಂಘಟಿತ ಹೋರಾಟವನ್ನು ಕೊಂಡಾಡಲೇಬೇಕು. ಅದರಲ್ಲೂ ಕಳೆದ ಪಂದ್ಯದಲ್ಲೂ ಹೀರೋ ಆಗಿದ್ದ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಮತ್ತೊಮ್ಮೆ 3 ವಿಕೆಟ್ ಕಬಳಿಸಿ ಮಿಂಚಿದರು.  4 ಓವರ್ ಎಸೆದ ಬುಮ್ರಾ ಕೇವಲ 14 ರನ್ ನೀಡಿದರು. ಅವರ ಈ ಸ್ಪೆಲ್ ಪಂದ್ಯಕ್ಕೆ ತಿರುವು ನೀಡಿತು. ಜೊತೆಗೆ ಅಕ್ಸರ್ ಪಟೇಲ್ ಕೂಡಾ ಎದುರಾಳಿಗಳ ಮೇಲೆ ಒತ್ತಡ ಹಾಕಿದ್ದಲ್ಲದೆ 1 ವಿಕೆಟ್ ಕಬಳಿಸಿದರು. ಹಾರ್ದಿಕ್ ಕೊಂಚ ದುಬಾರಿಯಾದರೂ 2 ವಿಕೆಟ್ ಕಬಳಿಸಿದರು. ಭಾರತೀಯ ಬೌಲರ್ ಗಳು ಒತ್ತಡ ನೀಡಿದ್ದರಿಂದ ಪಾಕಿಸ್ತಾನದ ಕೆಳ ಕ್ರಮಾಂಕ ರನ್ ಗಳಿಸಲು ಪರದಾಡಿತು. ಮೊಹಮ್ಮದ್ ರಿಜ್ವಾನ್ 31, ಬಾಬರ್ ಅಜಮ್ 13, ಉಸ್ಮಾನ್ ಖಾನ್, ಫಕರ್ ಜಮಾನ್ ತಲಾ 13, ಇಮದ್ ವಾಸಿಂ, 15 ರನ್ ಗಳ ಕೊಡುಗೆ ನೀಡಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಗರು ಕೈ ಕೊಟ್ಟರೂ ಭಾರತೀಯ ಬೌಲರ್ ಗಳ ಸಂಘಟಿತ ಹೋರಾಟದಿಂದ ತಂಡ ಗೆಲುವು ಸಾಧಿಸಲು ಯಶಸ್ವಿಯಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ 2024: ಭಾರತ, ಪಾಕಿಸ್ತಾನ ಪಂದ್ಯದಲ್ಲಿ ಮಳೆಯ ಕಾರುಬಾರಿನ ನಡುವೆ ನಡೆದ ಟಾಸ್