Webdunia - Bharat's app for daily news and videos

Install App

T20 World Cup 2024: ಕೊನೆಯ ಲೀಗ್ ಪಂದ್ಯವನ್ನು ಸುಲಭವಾಗಿ ಗೆದ್ದ ನ್ಯೂಜಿಲೆಂಡ್

Krishnaveni K
ಮಂಗಳವಾರ, 18 ಜೂನ್ 2024 (08:50 IST)
ಟ್ರಿನಿಡಾಡ್: ಪಪುವಾ ನ್ಯೂಗಿನಿ ತಂಡವನ್ನು ಸುಲಭವಾಗಿ 7 ವಿಕೆಟ್ ಗಳಿಂದ ಸೋಲಿಸಿದ ನ್ಯೂಜಿಲೆಂಡ್ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿನೊಂದಿಗೆ ಈ ಟಿ20 ವಿಶ್ವಕಪ್ ಯಾತ್ರೆ ಮುಗಿಸಿದೆ.

ಇಂದು ಕೊನೆಯ ಹಂತದ ಲೀಗ್ ಪಂದ್ಯಗಳು ನಡೆಯುತ್ತಿವೆ. ಅದರಂತೆ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ತಂಡ 19.4 ಓವರ್ ಗಳಲ್ಲಿ 78 ರನ್ ಗಳಿಗೆ ಆಲೌಟ್ ಆಯಿತು. ಮಾರಕ ದಾಳಿ ಸಂಘಟಿಸಿದ ಲೂಕಿ ಫರ್ಗ್ಯುಸನ್ 3 ವಿಕೆಟ್ ಕಿತ್ತರೆ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಇಶ್ ಸೋಧಿ ತಲಾ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 12.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಗಳಿಸುವ ಮೂಲಕ ಸುಲಭ ಗೆಲುವು ದಾಖಲಿಸಿತು. ಆರಂಭಿಕ ಫಿನ್ ಅಲೆನ್ ಶೂನ್ಯಕ್ಕೆ ನಿರ್ಗಮಿಸಿದರೆ ಇನ್ನೊಬ್ಬ ಆರಂಭಿಕ ಕಾನ್ವೆ 35, ರಚಿನ್ ರವೀಂದ್ರ 6, ಕೇನ್  ವಿಲಿಯಮ್ಸನ್ ಅಜೇಯ 18, ಡೆರಿಲ್ ಮಿಚೆಲ್ ಅಜೇಯ 19 ರನ್ ಗಳಿಸಿದರು.

ಈ ಪಂದ್ಯದ ಫಲಿತಾಂಶ ಉಭಯ ತಂಡಗಳ ಮೇಲೂ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಈ ಟಿ20 ವಿಶ್ವಕಪ್ ನಿಂದ ಈಗಾಗಲೇ ಎರಡೂ ತಂಡಗಳು ಹೊರಬಿದ್ದಿವೆ. ಇದು ಎರಡೂ ತಂಡಕ್ಕೂ ಔಪಚಾರಿಕ ಪಂದ್ಯವಾಗಿತ್ತು. ಈಗಾಗಲೇ ಸೂಪರ್ 8 ಕ್ಕೇರಿದ ತಂಡಗಳು ಯಾವುವು ಎಂದು ನಿರ್ಧಾರವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments