ಬಾರ್ಬಡೋಸ್ ಬೀಚ್ ನಲ್ಲಿ ಅರೆನಗ್ನರಾಗಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ

Krishnaveni K
ಸೋಮವಾರ, 17 ಜೂನ್ 2024 (15:59 IST)
Photo Credit: X
ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಸೂಪರ್ 8 ರ ಘಟ್ಟಕ್ಕೇರಿರುವ ಟೀಂ ಇಂಡಿಯಾ ಆಟಗಾರರು ಈಗ ಮುಂದಿನ ಪಂದ್ಯಗಳಿಗಾಗಿ ವೆಸ್ಟ್ ಇಂಡೀಸ್ ದ್ವೀಪಕ್ಕೆ ಬಂದಿಳಿದಿದ್ದಾರೆ. ಬಾರ್ಬಡೋಸ್ ನ ಬೀಚ್ ನಲ್ಲಿ ಕ್ರಿಕೆಟಿಗರು ಮಸ್ತು ಮಾಡುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದ ಪಂದ್ಯಗಳನ್ನು ಭಾರತ ಅಮೆರಿಕಾದಲ್ಲಿ ಆಡಿತ್ತು. ಇದೀಗ ಸೂಪರ್ 8 ಕ್ಕೇರಿದೆ. ಮೊದಲ ಪಂದ್ಯ ಜೂನ್ 20 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ ದ್ವೀಪದಲ್ಲಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ಬಾರ್ಬಡೋಸ್ ನಲ್ಲಿ ಬೀಡುಬಿಟ್ಟಿದೆ.

ವಿಂಡೀಸ್ ಎಂದರೆ ಬೀಚ್ ಗಳಿಗೆ ಹೆಸರು ವಾಸಿ. ಇದೀಗ ಕ್ರಿಕೆಟಿಗರು ಬಾರ್ಬಡೋಸ್ ನಲ್ಲಿ ಬೀಚ್ ವಾಲಿಬಾಲ್ ಆಡಿ ಖುಷಿಪಟ್ಟಿದ್ದಾರೆ. ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಸೇರಿದಂತೆ ಬಹುತೇಕ ಕ್ರಿಕೆಟಿಗರು ಅರೆನಗ್ನರಾಗಿ ತಮ್ಮ ಕಟ್ಟಮಸ್ತಾದ ದೇಹ ಪ್ರದರ್ಶಿಸಿಕೊಂಡು ಬೀಚ್ ವಾಲಿಬಾಲ್ ಆಡುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಮಕ್ಕಳಂತೆ ಮಸ್ತಿ ಮಾಡಿದ್ದಾರೆ. ಇನ್ನೊಂದು ಕಡೆ ತಂಡದಲ್ಲಿ ಬೆಸ್ಟ್ ವಾಲಿಬಾಲ್ ಪ್ಲೇಯರ್ ಎಂದರೆ ಅದು ರಿಂಕು ಸಿಂಗ್ ಮತ್ತು ಯಶಸ್ವಿ ಜೈಸ್ವಾಲ್ ಎಂದು ಸಹ ಕ್ರಿಕೆಟಿಗರು ಹೊಗಳಿದ್ದಾರೆ. ಲೀಗ್ ಹಂತದ ಪಂದ್ಯದ ಬಳಿಕ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿರುವ ಕ್ರಿಕೆಟಿಗರು ನಾಳೆಯಿಂದ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI TEST: ಕನ್ನಡಿಗ ರಾಹುಲ್‌ ಅಜೇಯ ಅರ್ಧಶತಕ: ಮೊದಲ ದಿನ ಭಾರತಕ್ಕೆ ಮೇಲುಗೈ

India vs West Indies TEST: ಸಿರಾಜ್, ಬೂಮ್ರಾ ಬೆಂಕಿದಾಳಿಗೆ ವಿಂಡೀಸ್ ಉಡೀಸ್‌

ಆರ್‌ಸಿಬಿ ತಂಡದ ಮಾರಾಟಕ್ಕೆ ಮತ್ತೆ ರೆಕ್ಕೆ ಪುಕ್ಕ: ಕುತೂಹಲ ಕೆರಳಿಸಿದ ಪೂನಾವಾಲ ಪೋಸ್ಟ್‌

ಏಷ್ಯಾ ಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ವಿಂಡೀಸ್‌ ಮೇಲೆ ಸವಾರಿ ಮಾಡುವತ್ತ ಟೀಂ ಇಂಡಿಯಾ

ಬಿಸಿಸಿಐ ಮುಂದೆ ಥಂಡಾ ಹೊಡೆದು ಏಷ್ಯಾ ಕಪ್ ಟ್ರೋಫಿ ವಾಪಸ್ ಮಾಡಿದ ಮೊಹ್ಸಿನ್ ನಖ್ವಿ

ಮುಂದಿನ ಸುದ್ದಿ
Show comments