Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ 2024: ಟೀಂ ಇಂಡಿಯಾ ಪಾಲಿಗೆ ವರವಾದ ಪೆನಾಲ್ಟಿ ರನ್

Team India

Krishnaveni K

ನ್ಯೂಯಾರ್ಕ್ , ಗುರುವಾರ, 13 ಜೂನ್ 2024 (10:33 IST)
Photo Credit: BCCI
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಐಸಿಸಿ ಅಳವಡಿಸಿರುವ ಹೊಸ ನಿಯಮವೊಂದು ಟೀಂ ಇಂಡಿಯಾಗೆ ನಿನ್ನೆಯ ಪಂದ್ಯದಲ್ಲಿ ವರವಾಗಿ ಪರಿಣಮಿಸಿದೆ. ಇದರಿಂದಾಗಿ ಭಾರತ ಗೆಲ್ಲಲು ಸುಲಭವಾಗಿದೆ.

ಟಿ20 ವಿಶ್ವಕಪ್ ನಲ್ಲಿ ಐಸಿಸಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಅದರಂತೆ ಎಲ್ಲಾ ತಂಡಗಳೂ ಒಂದು ಓವರ್ ಮುಗಿಸಿ ಮತ್ತೊಂದು ಓವರ್ ಪ್ರಾರಂಭಿಸಲು 60 ಸೆಕೆಂಡ್ ಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ.  ಈ ತಪ್ಪು ಮೂರು ಬಾರಿ ಪುನರಾವರ್ತನೆಯಾದರೆ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಸಿಗುತ್ತದೆ.

ಯುಎಸ್ ಎ ತಂಡಕ್ಕೆ ಈ ನಿಯಮವೇ ಮುಳ್ಳಾಯಿತು. ಒಂದು ಹಂತದಲ್ಲಿ ಭಾರತ 30 ಎಸೆತಗಳಿಂದ 35 ರನ್ ಗಳಿಸಬೇಕಾದ ಒತ್ತಡದಲ್ಲಿತ್ತು. ಈ ವೇಳೆ ಈ ಐದು ಪೆನಾಲ್ಟಿ ರನ್ ಸಿಕ್ಕಿದ್ದರಿಂದ ಭಾರತ 30 ಎಸೆತಗಳಿಂದ 30 ರನ್ ಗಳಿಸಿದರೆ ಸಾಕು ಎಂಬ ಪರಿಸ್ಥಿತಿ ಬಂತು.

ಇದರಿಂದ ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ಭಾರತಕ್ಕೆ ಕೊಂಚ ನಿರಾಳವಾಯಿತು. ತಕ್ಕಮಟ್ಟಿಗೆ ರನ್ ರೇಟ್ ಕಡಿಮೆಯಾಗಿದ್ದರಿಂದ ಭಾರತ ಅಂತಿಮವಾಗಿ 10 ಎಸೆತ ಬಾಕಿ ಇರುವಂತೆಯೇ 111 ರನ್ ಗಳಿಸಿ ಯುಎಸ್ ಎ ವಿರುದ್ಧ 7 ವಿಕೆಟ್ ಗಳ ಗೆಲುವು ದಾಖಲಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ನ್ಯೂಜಿಲೆಂಡ್ ಸೋಲಿಸಿದ ವೆಸ್ಟ್ ಇಂಡೀಸ್ ಸೂಪರ್ 8 ಕ್ಕೆ