Webdunia - Bharat's app for daily news and videos

Install App

ಟಿ20 ವಿಶ್ವಕಪ್ 2024: 48 ರನ್, 19 ಬಾಲ್ ಇಂಗ್ಲೆಂಡ್ ದಾಖಲೆಯ ರನ್ ಚೇಸಿಂಗ್

Krishnaveni K
ಶುಕ್ರವಾರ, 14 ಜೂನ್ 2024 (09:23 IST)
ಆಂಟಿಗುವಾ: ಟಿ20 ವಿಶ್ವಕಪ್ ನಲ್ಲಿ ಅಗತ್ಯ ಸಂದರ್ಭದಲ್ಲೇ ಸಿಡಿದೆದ್ದ ಇಂಗ್ಲೆಂಡ್ ತಂಡ ನಮೀಬಿಯಾ ವಿರುದ್ಧ 48 ರನ್ ಗಳ ಗುರಿಯನ್ನು 19 ಬಾಲ್ ಗಳಲ್ಲಿ ಚೇಸ್ ಮಾಡಿ ದಾಖಲೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಒಮನ್ ಬ್ಯಾಟಿಂಗ್ ಸಂಪೂರ್ಣ ಪತರಗುಟ್ಟಿತು. ಕೇವಲ ಶೊಯೇಬ್ ಖಾನ್ 11 ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರ ಸ್ಕೋರ್ 10 ರ ಗಡಿಯನ್ನೂ ದಾಟಲಿಲ್ಲ. ಇಂಗ್ಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ಆದಿಲ್ ರಶೀದ್ 4 ವಿಕೆಟ್ ಕಬಳಿಸಿದರೆ ಜೋಫ್ರಾ ಆರ್ಚರ್, ಮಾರ್ಕ್ ವುಡ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಅಂತಿಮವಾಗಿ ಒಮನ್ ಕೇವಲ 13.2 ಓವರ್ ಗಳಲ್ಲಿ 47 ರನ್ ಗಳಿಗೆ ಆಲೌಟ್ ಆಯಿತು.

ಈ ಮೊತ್ತ ಬೆನ್ನತ್ತುವುದು ಇಂಗ್ಲೆಂಡ್ ಗೆ ನೀರು ಕುಡಿದಷ್ಟೇ ಸಲೀಸಾಯಿತು. ಕೇವಲ 3.1 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿದ ಇಂಗ್ಲೆಂಡ್ ದಾಖಲೆಯ ಗೆಲುವು ಪಡೆಯಿತು. ಜೋಸ್ ಬಟ್ಲರ್ ಅಜೇಯ 24 ರನ್ ಗಳಿಸಿದರು.  ಫಿಲಿಪ್ ಸಾಲ್ಟ್ 12, ವಿಲ್ ಜ್ಯಾಕ್ಸ್ 5 ರನ್ ಗಳಿಸಿ ಔಟಾದರು. ಜಾನಿ ಬೇರ್ ಸ್ಟೋ ಅಜೇಯ 8 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಇಂಗ್ಲೆಂಡ್ ಟಿ20  ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ಬಾಲ್ ಬಾಕಿ ಇರುವಂತೆಯೇ ಗೆದ್ದ ದಾಖಲೆ ಮಾಡಿತು. ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಒಮನ್ ತಂಡ ನಾಲ್ಕನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು. ಇದರೊಂದಿಗೆ ಇಂಗ್ಲೆಂಡ್ 8 ರ ಘಟ್ಟಕ್ಕೆ ತಲುಪುವ ಹಾದಿ ಸುಗಮವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

ಮುಂದಿನ ಸುದ್ದಿ
Show comments