T20 World Cup 2024: ಮೊದಲ ಬಾಲ್ ನಲ್ಲೇ ವಿಕೆಟ್ ಉಡಾಯಿಸಿ ದಾಖಲೆ ಮಾಡಿದ ಅರ್ಷ್ ದೀಪ್ ಸಿಂಗ್

Krishnaveni K
ಗುರುವಾರ, 13 ಜೂನ್ 2024 (13:15 IST)
Photo Credit: BCCI
ನ್ಯೂಯಾರ್ಕ್: ಅಮೆರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅಮೆರಿಕಾ ಇನಿಂಗ್ಸ್ ನ ಮೊದಲ ಓವರ್ ನ್ನು ಅರ್ಷ್ ದೀಪ್ ಸಿಂಗ್ ಮಾಡಿದರು. ಮೊದಲ ಎಸೆತದಲ್ಲೇ ಶಯಾನ್ ಜಹಾಂಗೀರ್ ಮೊದಲ ಎಸೆತಕ್ಕೇ ಔಟಾದರು. ಇದು ಇನಿಂಗ್ಸ್ ನ ಮೊದಲ ಬಾಲ್ ಆಗಿತ್ತು.

ಈ ಮೂಲಕ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಅಪರೂಪದ ದಾಖಲೆಯನ್ನು ಅರ್ಷ್ ದೀಪ್ ಮಾಡಿದರು. ಜಾಗತಿಕವಾಗಿ ಅವರು ಈ ಸಾಧನೆ ಮಾಡಿದ ಐದನೇ ಬೌಲರ್ ಆಗಿದ್ದಾರೆ. ಇದೇ ವಿಶ್ವಕಪ್ ನಲ್ಲಿ ಒಮನ್ ವಿರುದ್ಧ ನಮೀಬಿಯಾದ ರುಬೆನ್ ಟ್ರಂಪ್ಲ್ ಮಾನ್ ಈ ಸಾಧನೆ ಮಾಡಿದ್ದಾರೆ.

ವಿಶೇಷವೆಂದರೆ ರುಬೆನ್ 2021 ವಿಶ್ವಕಪ್ ನಲ್ಲೂ ಸ್ಕಾಟ್ ಲ್ಯಾಂಡ್ ವಿರುದ್ಧ ಈ ದಾಖಲೆ ಮಾಡಿದ್ದರು. ಅವರನ್ನು ಬಿಟ್ಟರೆ 2014 ರ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶದ ಮುಶ್ರಫೆ ಮೋರ್ತಜ ಮತ್ತು  ಅಫ್ಘಾನಿಸ್ತಾನದ ಶಪೂರ್ ಜಡ್ರಾನ್ ಈ ದಾಖಲೆ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇದೊಂದು ವಿಡಿಯೋವೇ ರೋಹಿತ್ ಶರ್ಮಾ ನಿವೃತ್ತಿಯ ಸುಳಿವು ನೀಡಿರೋದು Video

IND vs ENG: ಲಾರ್ಡ್ಸ್ ಏಕದಿನ ಪಂದ್ಯವೇ ರೋಹಿತ್ ಶರ್ಮಾಗೆ ಕೊನೆಯ ಪಂದ್ಯವೇ

IND vs ENG: ಎಲ್ಲೋದ್ರು ಆ ರೋಹಿತ್ ಶರ್ಮಾ: ಫ್ಯಾನ್ಸ್ ಗೆ ಬೇಸರ ತಂದ ಹಿಟ್ ಮ್ಯಾನ್

IND vs ENG: ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೆಎಲ್ ರಾಹುಲ್ ಗೈರು

ಮೂರನೇ ವಿಶ್ವಕಪ್‌ ಕಿರೀಟದ ಕನಸಿನಲ್ಲಿದ್ದ ಫ್ರಾನ್ಸ್‌ಗೆ ನಿರಾಸೆ: ಫೈನಲ್‌ಗೆ ಲಗ್ಗೆ ಹಾಕಿದ ಸ್ಪೇನ್‌

ಮುಂದಿನ ಸುದ್ದಿ
Show comments