ಟಿ20 ವಿಶ್ವಕಪ್: ಎ ಗುಂಪಿಗೆ ಮಳೆಯೇ ಶಾಪ

Webdunia
ಭಾನುವಾರ, 30 ಅಕ್ಟೋಬರ್ 2022 (08:30 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಎ ಗುಂಪಿನ ತಂಡಗಳಿಗೆ ಈ ಬಾರಿ ಮಳೆಯೇ ಶಾಪವಾಗಿದೆ. ಮಳೆಯಿಂದಾಗಿ ಎರಡು ಪಂದ್ಯಗಳು ರದ್ದಾಗಿವೆ.

ಭಾರತ-ಪಾಕಿಸ್ತಾನ ಪಂದ್ಯಕ್ಕೇ ಮಳೆ ಭೀತಿಯಿತ್ತು. ಆದರೆ ಅದೃಷ್ಟವಶಾತ್ ಆ ಪಂದ್ಯಗಳು ನಡೆದಿದ್ದವು. ಇದಾದ ಬಳಿಕ ಈಗ ಐರ್ಲೆಂಡ್-ಅಫ್ಘನ್, ಅಸೀಸ್-ಇಂಗ್ಲೆಂಡ್ ಪಂದ್ಯಗಳು ಸತತವಾಗಿ ಮಳೆಯಿಂದಾಗಿ ರದ್ದಾಗಿವೆ.

ಇದು ಅಂಕಪಟ್ಟಿಯ ಮೇಲೆ ಪರಿಣಾಮ ಬೀರಲಿವೆ. ಅದರಲ್ಲೂ ಅಫ್ಘಾನಿಸ್ತಾನಕ್ಕೆ ಮಳೆಯಿಂದಾಗಿ ಎರಡೂ ಪಂದ್ಯಗಳು ರದ್ದಾಗಿವೆ.  ಆಸ್ಟ್ರೇಲಿಯಾ ಮೊದಲ ಪಂದ್ಯ ಸೋತಿದ್ದರಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯ ಮಹತ್ವದ್ದಾಗಿತ್ತು. ಆದರೆ ಅದೂ ರದ್ದಾಗಿದೆ. ವಿಶೇಷವೆಂದರೆ ಎ ಗುಂಪಿನ ತಂಡಗಳಿಗೇ ಮಳೆ ಕಾಟ ಕೊಡುತ್ತಿರುವುದು ದುರಾದೃಷ್ಟ. ಇದೀಗ ಭಾರತ-ದ.ಆಫ್ರಿಕಾ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಮಳೆ ಕಾಟ ಕಾಡದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.


-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ವಿರಾಟ್ ಕೊಹ್ಲಿ ಶತಕದ ಸ್ಟೈಲ್ ಕಾಪಿ ಮಾಡಿದ ಬಾಬರ್ ಅಜಮ್: ಸ್ವಂತಿಕೆನೇ ಇಲ್ವಾ ಎಂದ ನೆಟ್ಟಿಗರು video

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments