Select Your Language

Notifications

webdunia
webdunia
webdunia
webdunia

T20 WC Final: ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ: ಆಡುವ ಬಳಗದಲ್ಲಿ ಅಭಿಷೇಕ್‌ ಶರ್ಮಾ ಇರ್ತಾರಾ

T20 World Cup final, Batsman Abhishek Sharma, India Cricket
ಅಹಮದಾಬಾದ್‌: ಟಿ20 ವಿಶ್ವಕಪ್‌ ಫೈನಲ್‌ ಹಣಾಹಣಿಗೆ ಕ್ಷಣಗಣನೆ ಆರಂಭವಾಗಲಿದೆ. ಇಂದು ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಈ ಮಧ್ಯೆ ಭಾರತೀಯರ ನೋಟ ಅಭಿಷೇಕ್‌ ಶರ್ಮಾ ಮೇಲಿದೆ. 

ವಿಶ್ವದ ನಂಬರ್‌ ಒನ್‌ ಬ್ಯಾಟರ್‌ ಆಗಿದ್ದ ಅಭಿಷೇಕ್‌ ಶರ್ಮಾ ಅವರು ಈ ಪಂದ್ಯದಲ್ಲಿ ಆಡುತ್ತಾರೋ? ಇಲ್ವೋ ಎನ್ನುವುದು ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಆರಂಭಿಕ ಆಟಗಾರನಾಗಿ ಅಭಿಷೇಕ್‌ ಶರ್ಮಾ ಕಳಪೆ ಪ್ರದರ್ಶನ ನೀಡುತ್ತಿರುವುದು. ಫೈನಲ್‌ ಪಂದ್ಯಕ್ಕೆ ಟೀಂ ಇಂಡಿಯಾ ಅಭಿಷೇಕ್‌ ಶರ್ಮಾ ಜಾಗಕ್ಕೆ ರಿಂಕು ಸಿಂಗ್‌  ಅವರನ್ನು ಆಡಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ ಕೇವಲ 89 ರನ್‌ ಹೊಡೆದಿದ್ದಾರೆ. ಈ ಪೈಕಿ ಅಮೆರಿಕ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್‌ ವಿರುದ್ಧ ಸೊನ್ನೆಗೆ ಔಟಾದರೆ ದಕ್ಷಿಣ ಆಫ್ರಿಕಾ ವಿರುದ್ಧ 15 ರನ್‌, ವೆಸ್ಟ್‌ ಇಂಡೀಸ್‌ ವಿರುದ್ಧ 10 ರನ್‌, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 9 ರನ್‌ ಗಳಿಸಿ ಔಟಾಗಿದ್ದಾರೆ

ಜಿಂಬಾಬ್ವೆ ವಿರುದ್ಧ 30 ಎಸೆತಗಳಲ್ಲಿ 55 ರನ್‌ ಹೊಡೆದಿದ್ದೇ ಈ ಟೂರ್ನಿಯ ಅತ್ಯುತ್ತಮ ಸಾಧನೆ. ಹೀಗಾಗಿ ಕೋಚ್‌ ಗೌತಮ್‌ ಗಂಭೀರ್‌ ಮತ್ತು ನಾಯಕ ಸೂರ್ಯ ಕುಮಾರ್‌ ಯಾದವ್‌ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ. ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕ ಪಟ್ಟಿಯಲ್ಲಿ 874 ರೇಟಿಂಗ್‌ ಪಡೆದ ಅಭಿಷೇಕ್‌ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಇದು ಟಿ20 ವಿಶ್ವಕಪ್‌ ಪಂದ್ಯ ನಡೆಯುವ ಮೊದಲು ಪ್ರಕಟವಾಗಿರುವ ಪಟ್ಟಿಯಾಗಿದ್ದು ಇಶನ್‌ ಕಿಶನ್‌ ಮೂರನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

T20 WC FINAL: ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ಬಲಾಬಲದ ಲೆಕ್ಕಾಚಾರ ಹೀಗಿದೆ