ಐಪಿಎಲ್ ಗೆ ಮುನ್ನ ಸೂರ್ಯಕುಮಾರ್ ಯಾದವ್ ಹಾರ್ಟ್ ಬ್ರೇಕ್!

Krishnaveni K
ಮಂಗಳವಾರ, 19 ಮಾರ್ಚ್ 2024 (16:14 IST)
Photo Courtesy: Twitter
ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಸ್ಟೇಟಸ್ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಗಾಯದಿಂದಾಗಿ ಸೂರ್ಯಕುಮಾರ್ ಯಾದವ್ ಹಲವು ಸಮಯದಿಂದ ಕ್ರಿಕೆಟ್ ನಿಂದ ದೂರವುಳಿದಿದ್ದಾರೆ. ಐಪಿಎಲ್ ವೇಳೆಗೆ ಅವರು ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಆದರೆ ಈಗ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಾರ್ಟ್ ಬ್ರೇಕ್ ಆಗಿರುವ ಇಮೋಜಿ ಪ್ರಕಟಿಸಿ ಎಲ್ಲರಿಗೂ ಅಚ್ಚರಿಯುಂಟು ಮಾಡಿದ್ದಾರೆ.

ಮೂಲಗಳ ಪ್ರಕಾರ ಸೂರ್ಯಕುಮಾರ್ ಯಾದವ್ ಇಂದು ಎನ್ ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾಗಿದ್ದಾರೆ. ಈ ವೇಳೆ ಅವರು ಫಿಟ್ನೆಸ್ ಪಾಸ್ ಮಾಡಿರಲ್ಲ. ಹೀಗಾಗಿ ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದೇ ಕಾರಣಕ್ಕೆ ಹಾರ್ಟ್ ಬ್ರೇಕ್ ಇಮೋಜಿ ಹಾಕಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಆಡಲಿದೆ. ಇದೂ ಕೂಡಾ ಸೂರ್ಯ ಸೇರಿದಂತೆ ಕೆಲವು ಕ್ರಿಕೆಟಿಗರಿಗೆ ಬೇಸರವುಂಟು ಮಾಡಿತ್ತು. ಇದರ ಸೂರ್ಯ ಇಂತಹದ್ದೊಂದು ಸ್ಟೇಟಸ್ ಹಾಕಿದ್ದು ಯಾಕೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RR VS GT Match: ತಂದೆ ಡ್ಯಾನ್ಸ್ ಮಾಡಿದಾಗ ಶುಭ್ಮನ್ ಗಿಲ್ ಹೇಗೇ ನಾಚಿಕೊಂಡ್ರು ನೋಡಿ, Video

ಆತನ ವಯಸ್ಸಿನಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿ ಬ್ಯಾಟಿಂಗ್‌ಗೆ ಅಮಿತಾಬ್ ಬಚ್ಚನ್ ಫಿದಾ

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಮುಂದಿನ ಸುದ್ದಿ
Show comments