ನೀವ್ಯಾಕೆ ಪಾಕಿಸ್ತಾನಕ್ಕೆ ಅವಮಾನ ಮಾಡಿದ್ರಿ ಎಂದಾಗ ಸೂರ್ಯಕುಮಾರ್ ಯಾದವ್ ಉತ್ತರ ಏನಿತ್ತು ನೋಡಿ

Krishnaveni K
ಸೋಮವಾರ, 15 ಸೆಪ್ಟಂಬರ್ 2025 (11:12 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಎದುರಾಳಿ ಆಟಗಾರರ ಕೈಕುಲುಕದೇ ಇದ್ದಿದ್ದು ಯಾಕೆ ಎಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಗೆ ಪತ್ರಕರ್ತರು ಪ್ರಶ್ನಿಸಿದ್ದು ಇದಕ್ಕೆ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ನಿನ್ನೆ ಪಂದ್ಯಕ್ಕೆ ಮೊದಲು ಟಾಸ್ ವೇಳೆಯೂ ಸೂರ್ಯ ಮತ್ತು ಪಾಕ್ ನಾಯಕ ಸಲ್ಮಾನ್ ಕೈಕುಲುಕಲಿಲ್ಲ. ಪಂದ್ಯ ಮುಗಿದ ಬಳಿಕ ಸಾಮಾನ್ಯವಾಗಿ ಯಾವುದೇ ತಂಡವಾದರೂ ಪರಸ್ಪರ ಕೈಕುಲುಕುವ ಸಂಪ್ರದಾಯವಿದೆ. ಆದರೆ ನಿನ್ನೆಯ ಪಂದ್ಯದ ಬಳಿಕ ಪಾಕ್ ಆಟಗಾರರು ಮೈದಾನದಲ್ಲಿ ಕಾಯುತ್ತಿದ್ದರೂ ಭಾರತೀಯ ಆಟಗಾರರು ಕೈಕುಲುಕಲು ಬಾರದೇ ಪೆವಿಲಿಯನ್ ಬಾಗಿಲು ಬಂದ್ ಮಾಡಿದ್ದರು.

ಇದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಗೆ ಪರ್ತಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ. ನೀವು ಯಾಕೆ ಪಾಕಿಸ್ತಾನ ಆಟಗಾರರ ಕೈ ಕುಲುಕಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

‘ನಮಗೇನೂ ಸಮಸ್ಯೆಯಿಲ್ಲ. ಕೆಲವೊಂದು ವಿಚಾರಗಳು ಕ್ರೀಡಾ ಮನೋಭಾವಕ್ಕಿಂತ ದೇಶವೇ ದೊಡ್ಡದು ಎಂದಿರುತ್ತದೆ. ಇದೂ ಕೂಡಾ ಹಾಗೆಯೇ. ನಾನು ಪ್ರಶಸ್ತಿ ಸಮಾರಂಭದಲ್ಲೂ ಹೇಳಿದ್ದೇನೆ, ನಾವು ಪಹಲ್ಗಾಮ್ ದಾಳಿಯ ಸಂತ್ರಸ್ತರ ಜೊತೆಗಿದ್ದೇವೆ. ಭಾರತೀಯ ಸೇನೆ ಜೊತೆಗಿದ್ದೇವೆ. ಹೀಗಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಸಾಯಿ ಸುದರ್ಶನ್ ಗೆ ಬಾಲ್ ತಾನಾಗಿಯೇ ಕೈಯೊಳಗೆ ಬಂದು ಕೂತಿದ್ದು ಹೀಗೆ: video

Video: ಜೈಸ್ವಾಲ್ ದ್ವಿಶತಕ ತಪ್ಪಲು ಶುಭಮನ್ ಗಿಲ್ ಮೋಸ ಕಾರಣ: ಕೊಹ್ಲಿ ನೋಡಿ ಕಲಿಯಿರಿ ಎಂದ ನೆಟ್ಟಿಗರು

ರೋಹಿತ್ ಶರ್ಮಾರನ್ನು ನೋಡಿ ಅತ್ತೇ ಬಿಟ್ಟ ಬಾಲಕ: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Video: ರೋಹಿತ್ ಶರ್ಮಾ ಅಭ್ಯಾಸ ನೋಡಲು ದೆಹಲಿ ಟೆಸ್ಟ್ ಪಂದ್ಯಕ್ಕಿಂತಲೂ ಹೆಚ್ಚು ವೀಕ್ಷಕರು

IND vs WI test: ದಿನವಿಡೀ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟಿಗರು

ಮುಂದಿನ ಸುದ್ದಿ
Show comments