Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೂ ಸದ್ಯದಲ್ಲೇ ಕೊಕ್

Suryakumar Yadav

Krishnaveni K

ಮುಂಬೈ , ಭಾನುವಾರ, 5 ಅಕ್ಟೋಬರ್ 2025 (11:53 IST)
ಮುಂಬೈ: ಏಕದಿನ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕಿತ್ತು ಹಾಕಿದ ಬೆನ್ನಲ್ಲೇ ಈಗ ಟಿ20 ನಾಯಕ ಸೂರ್ಯಕುಮಾರ್ ಯಾದವ್ ರನ್ನೂ ನಾಯಕತ್ವದಿಂದ ಕಿತ್ತು ಹಾಕುವ ಬಗ್ಗೆ ಸುದ್ದಿಗಳು ಕೇಳಿಬಂದಿವೆ.

ಟೀಂ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಈಗ ಶುಭಮನ್ ಗಿಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಟಿ20 ತಂಡಕ್ಕೆ ಮಾತ್ರ ಸೂರ್ಯಕುಮಾರ್ ಯಾದವ್ ಅವರೇ ನಾಯಕರಾಗಿ ಮುಂದುವರಿದಿದ್ದಾರೆ. ಕಳೆದ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದರು.

ಆದರೆ ಸೂರ್ಯಕುಮಾರ್ ನಾಯಕತ್ವವೂ ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ ಎಂದು ಹೇಳಲಾಗಿದೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ರನ್ನು ನಾಯಕತ್ವದಿಂದ ಕಿತ್ತು ಹಾಕಿ ಶುಭಮನ್ ಗಿಲ್ ಗೇ ಕಿರು ಮಾದರಿ ನಾಯಕತ್ವವೂ ವಹಿಸಲು ಬಿಸಿಸಿಐ ಮುಂದಾಗಿದೆ.

2026 ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್ ಗೆ ಸೂರ್ಯಕುಮಾರ್ ಯಾದವ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಅದಾದ ಬಳಿಕ ಗಿಲ್ ಗೇ ಟಿ20 ನಾಯಕತ್ವವನ್ನೂ ವಹಿಸಲಾಗುತ್ತದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೇ ಟೀಂ ಇಂಡಿಯಾದಲ್ಲಿ ಸ್ಥಾನ ಗ್ಯಾರಂಟಿ ಇಲ್ಲ