Publish Date: Sun, 02 Oct 2022 (21:12 IST)
Updated Date: Sun, 02 Oct 2022 (21:14 IST)
ಗುವಾಹಟಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗರು ರನ್ ಹೊಳೆ ಹರಿಸಿದ್ದಾರೆ.
ಅದರಲ್ಲೂ ಸೂರ್ಯಕುಮಾರ್ ಯಾದವ್ ಕೊನೆಗೆ ಬಂದು ಅಬ್ಬರಿಸಿದ ಪರಿಗೆ ಇಡೀ ಸ್ಟೇಡಿಯಂ ಹುಚ್ಚೆದ್ದು ಕುಣಿಯಿತು. ಸೂರ್ಯ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರ್ತಿ ಮಾಡಿದರು.
ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ವೇಗದ ಅರ್ಧಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡರು. 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಯುವರಾಜ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ.
-Edited by Rajesh Patil