Select Your Language

Notifications

webdunia
webdunia
webdunia
webdunia

ಗಾಂಧೀಜಿ ಬ್ರಿಟಿಷರ ಸೇವಕರಾಗಿದ್ದರು ಎಂದು ಕೇಳಿಸಿಕೊಳ್ಳಬೇಕಾ: ರಾಹುಲ್ ಗಾಂಧಿಗೆ ಕೋರ್ಟ್ ತರಾಟೆ

Rahul Gandhi

Krishnaveni K

ನವದೆಹಲಿ , ಶುಕ್ರವಾರ, 25 ಏಪ್ರಿಲ್ 2025 (14:06 IST)
ನವದೆಹಲಿ: ವೀರ ಸಾವರ್ಕರ್ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ಮುಂದೊಂದು ದಿನ ಗಾಂಧೀಜಿ ಬ್ರಿಟಿಷರ ಸೇವಕರಾಗಿದ್ದರು ಅಂತಾರೆ. ಅದನ್ನೆಲ್ಲಾ ಕೇಳಿಸಿಕೊಳ್ಳಬೇಕಾ ಎಂದು ತರಾಟೆಗೆ ತೆಗೆದುಕಂಡಿದೆ.

ರಾಹುಲ್ ಗಾಂಧಿ ಈ ಹಿಂದೆ ವಿಡಿ ಸಾವರ್ಕರ್ ಬ್ರಿಟಿಷರ ಸೇವಕ ಎಂದು ಅವಮಾನ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನೀಡಲಾದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಅಲಹಾಬಾದ್ ಆದೇಶಕ್ಕೆ ತಡೆ ನೀಡಿದೆ.

ಆದರೆ ರಾಹುಲ್ ಹೇಳಿಕೆ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ನೋಡುವ ರೀತಿ ಇದೇನಾ? ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಇಂತಹ ಹೇಳಿಕೆಗಳನ್ನು ನಾವು ಅನುಮತಿಸುವುದಿಲ್ಲ. ಮುಂದೆ ಇಂತಹ ಹೇಳಿಕೆ ನೀಡಿದರೆ ಸ್ವಯಂಪ್ರೇರಿತರಾಗಿ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಈ ಹಿಂದೆ ಮಹಾತ್ಮಾ ಗಾಂಧೀಜಿಯವರೂ ತಮ್ಮ ಪತ್ರದಲ್ಲಿ ಯುವರ್ ಫೈಥ್ ಫುಲ್ ಸರ್ವೆಂಟ್ ಎಂದು ಬರೆದಿದ್ದರು. ಅದರ ಅರ್ಥ ಅವರು ಬ್ರಿಟಿಷರ ಸೇವಕರೆಂದೇ?’ ಎಂದು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ