ನವದೆಹಲಿ: ಕೊನೆಗೂ ಬಿಸಿಸಿಐಗೆ ಹೊಸ ಬಾಸ್ ಗಳ ಆಗಮನವಾಗಿದೆ. ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಹೊಸದಾಗಿ ನಾಲ್ವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದೆ.
ವಿಶೇಷವೆಂದರೆ ಈ ಆಡಳಿತಾಧಿಕಾರಿಗಳ ಪಟ್ಟಿಯಲ್ಲಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಿಯಾನಾ ಎಡುಲ್ಜಿ ಕೂಡಾ ಸೇರಿದ್ದಾರೆ. ಮಾಜಿ ಸಿಎಜಿ ವಿನೋದ್ ರೈ ಬಿಸಿಸಿಐ ಮುಖ್ಯಸ್ಥರಾಗಿರುತ್ತಾರೆ. ಅವರ ಜತೆಗೆ ಎಡುಲ್ಜಿ ಅಲ್ಲದೆ, ಇತಿಹಾಸಜ್ಞ ರಾಮಚಂದ್ರ ಗುಹಾ, ವಿಕ್ರಮ್ ಲಿಮಾಯೆ ಆಡಳಿತಾಧಿಕಾರಿಗಳಾಗಿ ನೇಮಕವಾಗಿದ್ದಾರೆ.
ಅಲ್ಲದೆ ಫೆಬ್ರವರಿ 2 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಭಾಗವಹಿಸಲು ಬಿಸಿಸಿಐ ಜಂಟಿ ಕಾರ್ಯದರ್ಶಿ ಅನಿಲ್ ಚೌಧರಿ, ಖಜಾಂಜಿ ಅನಿರುದ್ಧ್ ಚೌದರಿ ಮತ್ತು ಲಿಮಾಯೆ ಅವರಿಗೆ ಅಧಿಕಾರ ನೀಡಲಾಗಿದೆ. ಇದೀಗ ಹೊಸ ಆಡಳಿತಾಧಿಕಾರಿಗಳು ಲೋಧಾ ಸಮಿತಿಯ ವರದಿಯನ್ವಯ ಬಿಸಿಸಿಐ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ