ಆಶಿಸ್ ನೆಹ್ರಾ ಅಮೋಘ ಬೌಲಿಂಗ್ ನೆರವಿನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 4 ರನ್‌ಗಳ ರೋಮಾಂಚಕ ಗೆಲುವನ್ನು ಗಳಿಸಿದೆ. ರೈಸಿಂಗ್ ಪುಣೆ ಪರ 6 ವಿಕೆಟ್ ಕಬಳಿಸಿದ ಜಾಂಪಾ ಬೌಲಿಂಗ್ ದಾಳಿ ಕೂಡ ವ್ಯರ್ಥವಾಯಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಪುಣೆಯ ಜಾಂಪಾ ಬೌಲಿಂಗ್ ದಾಳಿಗೆ ಆಟಗಾರರರು ಪೆವಿಲಿಯನ್ ಪೆರೇಡ್ ಮಾಡಿದರು. ವಿಲಿಯಂಸನ್, ಯುವರಾಜ್, ಹೆನ್ರಿಕ್ಸ್, ಹೂಡಾ, ಭುವನೇಶ್ವರ್ ಕುಮಾರ್ , ಓಜಾ ಅವರು ಜಾಂಪಾ ಬೌಲಿಂಗ್ ದಾಳಿಗೆ ಬಲಿಯಾದರು. ಜಾಂಪಾ 4 ಓವರುಗಳಲ್ಲಿ 19 ರನ್ ಮಾಡಿ 6 ವಿಕೆಟ್ ಕಬಳಿಸಿದರು.
ಸನ್ ರೈಸರ್ಸ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಆದರೆ ಆಶಿಶ್ ನೆಹ್ರಾ ಬೌಲಿಂಗ್ ದಾಳಿಗೆ ಬಲಿಯಾದ ರೈಸಿಂಗ್ ಪುಣೆ ಕೇವಲ 133 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಪುಣೆ ಪರ ಉಸ್ಮಾನ್ ಕ್ವಾಜಾ ಮತ್ತು ಧೋನಿ ರನ್‌ರೌಟ್‌ಗೆ ಬಲಿಯಾಗಿದ್ದು ಕೂಡ ಮಾರಕವಾಗಿ ಪರಿಣಮಿಸಿತು. ಆರಂಭಿಕ ಆಟಗಾರರಾದ ರಹಾನೆ ಮತ್ತು ಖ್ವಾಜಾ ಬೇಗನೇ ಔಟಾಗಿದ್ದು ಕೂಡ ಮುಳುವಾಗಿ ಪರಿಣಮಿಸಿತು.