Select Your Language

Notifications

webdunia
webdunia
webdunia
webdunia

2019ರಲ್ಲಿ ಧೋನಿ ನಾಯಕತ್ವ ವಹಿಸುವ ಖಾತರಿಯಿದೆಯೇ: ಗಂಗೂಲಿ ಪ್ರಶ್ನೆ

2019ರಲ್ಲಿ ಧೋನಿ ನಾಯಕತ್ವ ವಹಿಸುವ ಖಾತರಿಯಿದೆಯೇ:  ಗಂಗೂಲಿ ಪ್ರಶ್ನೆ
ನವದೆಹಲಿ: , ಮಂಗಳವಾರ, 10 ಮೇ 2016 (18:48 IST)
2019ರ 50 ಓವರುಗಳ ಐಸಿಸಿ ವಿಶ್ವ ಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಭಾರತವನ್ನು ಮುನ್ನಡೆಸುತ್ತಾರೆಂಬ ಕುರಿತು ಸೌರವ್ ಗಂಗೂಲಿಗೆ ಖಾತರಿಯಿಲ್ಲ.  ಕ್ರಿಕೆಟ್ ಆಡಳಿತಗಾರರಾಗಿ ಮಾಜಿ ನಾಯಕ ಗಂಗೂಲಿ ವಿರಾಟ್ ಕೊಹ್ಲಿ ಅವರಿಗೆ ನಾಯಕ ಹುದ್ದೆಯನ್ನು ನಿರ್ವಹಿಸಲು  ಬೆಂಬಲವಾಗಿ ನಿಂತಿದ್ದಾರೆ. 
 
 ಜಗತ್ತಿನ ಪ್ರತಿಯೊಂದು ಕ್ರಿಕೆಟ್ ತಂಡ ಭವಿಷ್ಯವನ್ನು ಯೋಜಿಸುತ್ತದೆ. ಆಯ್ಕೆದಾರರಿಗೆ ನನ್ನ ಪ್ರಶ್ನೆಯೇನೆಂದರೆ ಇನ್ನೂ 3-4 ವರ್ಷಗಳ ಕಾಲ ಧೋನಿಯನ್ನು ಭಾರತದ ನಾಯಕರಾಗಿ ಕಾಣಲಾಗುತ್ತದೆಯೇ ಎಂಬುದಾಗಿದೆ. 
 
ಗಂಗೂಲಿ ಧೋನಿಯ ಬಗ್ಗೆ  ಮತ್ತು ಅವರ ನಾಯಕತ್ವ ಕೌಶಲ್ಯದ ಬಗ್ಗೆ ಸದಾ ಪ್ರಶಂಸೆಯ ಸುರಿಮಳೆ ಸುರಿಸುತ್ತಿದ್ದರು. ಆದರೆ ಅಧಿಕಾರ ದಂಡವನ್ನು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಕಿರಿಯರಿಗೆ ಹಸ್ತಾಂತರಿಸಬೇಕೆಂಬುದು ಅವರ ಭಾವನೆಯಾಗಿದೆ.
 
 ಧೋನಿ 9 ವರ್ಷಗಳ ಕಾಲ ನಾಯಕರಾಗಿದ್ದಾರೆ. ಇನ್ನೂ 4 ವರ್ಷಗಳ ಕಾಲ ನಾಯಕತ್ವ ವಹಿಸುವ ಸಾಮರ್ಥ್ಯ ಅವರಿಗಿದೆಯೇ,ಈಗಾಗಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಈಗ ಏಕದಿನ ಮತ್ತು ಟಿ 20 ಮಾತ್ರ ಆಡುತ್ತಾರೆ ಎಂದು ಗಂಗೂಲಿ ಹೇಳಿದರು.
 
 ಗಂಗೂಲಿ ಕೊಹ್ಲಿಯನ್ನು ಫುಟ್ಬಾಲ್ ಲೆಜೆಂಡ್ ಮರಡೋನಾಗೆ ಹೋಲಿಸಿದ್ದಾರೆ. ಇತ್ತೀಚೆಗೆ ಮುಗಿದ ಐಸಿಸಿ ವಿಶ್ವ ಟಿ 20ಯಲ್ಲಿ ಅವರು ಪಂದ್ಯಾವಳಿ ಶ್ರೇಷ್ಠರಾಗಿದ್ದಾರೆ. ಐಪಿಎಲ್‌ನಲ್ಲಿ ಕೂಡ ಕೊಹ್ಲಿ ಪ್ರಮುಖ ಸ್ಕೋರರ್ ಆಗಿದ್ದಾರೆ.
 
 ವಿರಾಟ್ ಕೊಹ್ಲಿ ದಿನದಿನಕ್ಕೂ ಸುಧಾರಿಸುತ್ತಿದ್ದಾರೆ. ಸ್ಥಿರತೆಗೆ ಸಂಬಂಧಿಸಿದಂತೆ ಅವರು ಜಗತ್ತಿನಲ್ಲೇ ಅತ್ಯುತ್ತಮ. ಅವರ ಮಾನಸಿಕ ಶಕ್ತಿ, ಮೈದಾನದಲ್ಲಿ ನಡವಳಿಕೆ ಅದ್ಭುತವಾಗಿದೆ. ಆದ್ದರಿಂದ ಧೋನಿ 2019ರಲ್ಲಿ ಭಾರತವನ್ನು ಧೋನಿ ಮುನ್ನಡೆಸುವರೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಈ ಉತ್ತರ ಇಲ್ಲವೆಂದಾದರೆ, ಹೊಸ ನಾಯಕನನ್ನು ಹುಡುಕಿ ಎಂದು ಗಂಗೂಲಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಶಶಾಂಕ್ ಮನೋಹರ್ ರಾಜೀನಾಮೆ