ಮುಂಬೈ: ಮಾಜಿ ಕ್ರಿಕೆಟಿಗ, ಅನಾರೋಗ್ಯಪೀಡಿತರಾಗಿದ್ದ ವಿನೋದ್ ಕಾಂಬ್ಳಿ ತಿಂಗಳ ಖರ್ಚಿಗೆ ತಾವು ಕೊಟ್ಟ ಮಾತಿನಂತೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ನಿಗದಿತ ಮೊತ್ತದ ಹಣ ನೀಡಲು ಪ್ರಾರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗುರು ರಮಾಕಾಂತ್ ಅರ್ಚೇಕರ್ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ಅನಾರೋಗ್ಯದ ಬಗ್ಗೆ ಜಗಜ್ಜಾಹೀರಾಗಿತ್ತು. ಎದ್ದು ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಕಾಂಬ್ಳಿ ಸ್ಥಿತಿ ನೋಡಿ ಸುನಿಲ್ ಗವಾಸ್ಕರ್ ಮರುಗಿದ್ದರು.
ಆಗಲೇ ಕಾಂಬ್ಳಿಗೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಏಪ್ರಿಲ್ 1 ರಿಂದ ಪ್ರತೀ ತಿಂಗಳು ಸುನಿಲ್ ಗವಾಸ್ಕರ್ ಕಾಂಬ್ಳಿ ತಿಂಗಳ ಖರ್ಚಿಗಾಗಿ 30 ಸಾವಿರ ರೂ. ನೀಡಲಿದ್ದಾರೆ. ಈಗಾಗಲೇ ಒಂದು ಕಂತು ನೀಡಿದ್ದಾರೆ.
ಗವಾಸ್ಕರ್ 1987 ವಿಶ್ವಕಪ್ ವಿಜೇತ ತಂಡದ ಗೆಳೆಯರೊಂದಿಗೆ ಸೇರಿಕೊಂಡು ಚಾಂಪ್ಸ್ ಎನ್ನುವ ಫೌಂಡೇಷನ್ ನಡೆಸುತ್ತಿದ್ದಾರೆ. ಇದರ ಮೂಲಕ ವಿನೋದ್ ಕಾಂಬ್ಳಿಗೆ ಜೀವಿತಾವಧಿಯವರೆಗೂ ಸಹಾಯ ಮಾಡಲಿದ್ದಾರೆ. ಕೇವಲ ಕಾಂಬ್ಳಿ ಮಾತ್ರವಲ್ಲ, ಇಂತಹ ಸಂಕಕಷ್ಟದಲ್ಲಿರುವ ಕ್ರಿಕೆಟಿಗರಿಗೆ ಗವಾಸ್ಕರ್ ತಮ್ಮ ಫೌಂಡೇಷನ್ ಮೂಲಕ ನೆರವು ನೀಡುತ್ತಿದ್ದಾರೆ.