Select Your Language

Notifications

webdunia
webdunia
webdunia
webdunia

ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾಗೆ ಆಸ್ಟ್ರೇಲಿಯಾ ವಿರುದ್ಧ 47 ರನ್ ಜಯ

ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾಗೆ ಆಸ್ಟ್ರೇಲಿಯಾ ವಿರುದ್ಧ 47 ರನ್ ಜಯ
ಗಯಾನ: , ಬುಧವಾರ, 8 ಜೂನ್ 2016 (11:36 IST)
ತ್ರಿರಾಷ್ಟ್ರಗಳ ಏಕ ದಿನ ಅಂತಾರಾಷ್ಟ್ರೀಯ ಸರಣಿಯ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ 47 ರನ್ ಜಯಗಳಿಸುವ ಮೂಲಕ ನೆಟ್ ರನ್ ರೇಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ. ಎಲ್ಲಾ ಬ್ಯಾಟ್ಸ್‌ಮನ್‌ಗಳ ಸಹನೆ ಮತ್ತು ತಂತ್ರಕ್ಕೆ ಸವಾಲು ಹಾಕಿದ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಸಾಧಾರಣ 9 ವಿಕೆಟ್‌ಗೆ 189 ರನ್ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಓಪನರ್ ಆರಾನ್ ಫಿಂಚ್ ಅವರು ಪ್ರತಿರೋಧ ತೋರಿ 72 ರನ್ ಗಳಿಸಿದರಾದರೂ ಆಸ್ಟ್ರೇಲಿಯಾ 34.2 ಓವರುಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಪ್ಪಿದೆ.
 
ಈ ಜಯದ ಅಂತರದಿಂದ ದಕ್ಷಿಣ ಆಫ್ರಿಕಾ ಬೋನಸ್ ಪಾಯಿಂಟ್ ಗಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ನೆಟ್ ರನ್ ರೇಟ್‌ನಲ್ಲಿ ಕೊನೆಯಿಂದ ಮೊದಲ ಸ್ಥಾನಕ್ಕೆ ಜಿಗಿದಿದ್ದು, ವೆಸ್ಟ್ ಇಂಡೀಸ್ ತಂಡವನ್ನು ಮೂರನೇ ಸ್ಥಾನಕ್ಕೆ ದೂಡಿದೆ. ಫರ್ಹಾನ್ ಬೆಹರಡೀನ್ ಅವರ 62 ರನ್  ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ದಕ್ಕಿಸಿಕೊಟ್ಟಿತು. ರಬಾಡಾ ಮನೋಜ್ಞ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಕಬಳಿಸಿದರು.
 
 ರಬಾಡಾ ತಮ್ಮ ಆರಂಭದ ಓವರಿನಲ್ಲಿ ಕ್ವಾಜಾರನ್ನು ಔಟ್ ಮಾಡಿದ ಬಳಿಕ ತಮ್ಮ ನಿಯಂತ್ರಿತ ವೇಗದ ಬೌಲಿಂಗ್ ಮೂಲಕ ವಿಕೆಟ್ ಕೀಪರ್ ಮ್ಯಾಥೀವ್ ವೇಡ್ ಮತ್ತು ನಾಥನ್ ಕೌಲ್ಟರ್ ನೈಲ್ ಅವರನ್ನು ಔಟ್ ಮಾಡಿದರು. ವೇನ್ ಪಾರ್ನೆಲ್ ಅವರಿಗೆ ಬೆಂಬಲವಾಗಿ ನಿಂತು ಅಪಾಯಕಾರಿ ಡೇವಿಡ್ ವಾರ್ನರ್ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. 
 
 ಇದಕ್ಕೆ ಮುಂಚೆ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಜೋಡಿಯಾದ ಕೋಲ್ಟರ್ ನೈಲ್ ಮತ್ತು ಹ್ಯಾಜಲ್ ವುಡ್ ತಲಾ 2 ವಿಕೆಟ್ ಕಬಳಿಸಿ ಪ್ರೊಟೀಸ್ ತಂಡವನ್ನು ನಿರ್ಬಂಧಿಸಿದರು. ಮಿಚೆಲ್ ಸ್ಟಾರ್ಕ್ ಬದಲಿಗೆ ಬಂದ ಕೋಲ್ಟರ್ ನೈಲ್ 38ಕ್ಕೆ 2 ವಿಕೆಟ್ ಕಬಳಿಸಿದರು.
 
ಅವರು ಡಿ ವಿಲಿಯರ್ಸ್ ಮತ್ತು ಡುಮಿನಿ ವಿಕೆಟ್‌ಗಳನ್ನು ಸತತ ಓವರುಗಳಲ್ಲಿ ಕಬಳಿಸಿ ದಕ್ಷಿಣ ಆಫ್ರಿಕಾವನ್ನು 104ಕ್ಕೆ 5 ವಿಕೆಟ್‌ಗೆ ಇಳಿಸುವ ಮೂಲಕ ದಕ್ಷಿಣ ಆಫ್ರಿಕಾ ಸದೃಢ ಮೊತ್ತವನ್ನು ಮುಟ್ಟುವ ಅವಕಾಶವನ್ನು ತಪ್ಪಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾ ಕ್ರಿಕೆಟ್ ಕೋಚ್ ಆಫರ್ ತಿರಸ್ಕರಿಸಿದ ಪಾಕ್ ಬೌಲರ್ ಅಕಿಬ್ ಜಾವೇದ್