ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬೌಲಿಂಗ್ ಕೋಚ್ ಆಫರ್‌ನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಕಿಬ್ ಜಾವೇದ್ ತಿರಸ್ಕರಿಸಿದ್ದಾರೆ.
ಬಾಂಗ್ಲಾ ಕ್ರಿಕೆಟ್ ಮಂಡಳಿಯ ಕೋಚ್ ಆಫರ್ ತಿರಸ್ಕರಿಸಿದ ನಿರ್ಧಾರವನ್ನು ಇ-ಮೇಲ್ ಮೂಲಕ 43 ವರ್ಷ ವಯಸ್ಸಿನ ಜಾವೇದ್ ಮಾಹಿತಿ ನೀಡಿದ್ದಾರೆ.
ಬಾಂಗ್ಲಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಕ್ರಮ್ ಖಾನ್ ಮಾತನಾಡಿ, ಕೋಚ್ ಹುದ್ದೆಗೆ ಜಾವೇದ್ ಅವರ ಆಯ್ಕೆ ಅಂತಿಮ ನಿರ್ಧಾರವಾಗಿರಲಿಲ್ಲ. ಇತರ ಕ್ರಿಕೆಟಿಗರ ಬಗ್ಗೆ ಕೂಡಾ ಗಮನಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾ ಕ್ರಿಕೆಟ್ ತಂಡದ ಕೋಚ್ ಹುದ್ದೆ ತುಂಬಾ ಕಠಿಣವಾಗಿರಲಿದೆ. ನಾವು ಕೋಚ್ ಹೆಸರನ್ನು ಅಂತಿಮಗೊಳಿಸಿದಾಗ ಸತ್ಯ ಬಹಿರಂಗವಾಗುತ್ತದೆ ಎಂದು ತಿಳಿಸಿದ್ದಾರೆ.
ಅಕ್ರಮ್ ಮಾತನಾಡಿ, ಲಂಕಾದ ಚಂಪಕಾ ರಾಮನಾಯಕೆ, ಚಮಿಂದಾ ವ್ಯಾಸ್, ಜಾವೇದ್ ಮತ್ತು ಭಾರತದ ವೆಂಕಟೇಶ್ ಪ್ರಸಾದ್ ನಮ್ಮ ಕೋಚ್ ಹುದ್ದೆಗೆ ಇತರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಕಿಬ್ ಜಾವೇದ್ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಕೋಚ್ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.