Publish Date: Fri, 27 Jul 2018 (09:23 IST)
Updated Date: Fri, 27 Jul 2018 (09:24 IST)
ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನದಿಂದ ವಂಚಿತವಾಗಿರುವ ಕೆಎಲ್ ರಾಹುಲ್ ಪರವಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಮಾತನಾಡಿದ್ದಾರೆ.
ಅಭ್ಯಾಸ ಪಂದ್ಯದಲ್ಲೂ ಮುರಳಿ ವಿಜಯ್ ಜತೆಗೆ ಶಿಖರ್ ಧವನ್ ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಕೆಎಲ್ ರಾಹುಲ್ ಬದಲು ಧವನ್ ರನ್ನೇ ಆಡಿಸಲು ಚಿಂತನೆ ನಡೆಸಿದಂತಿದೆ.
ಈ ಬೆಳವಣಿಗೆ ಹಿನ್ನಲೆಯಲ್ಲಿ ಮಾತನಾಡಿರುವ ಗಂಗೂಲಿ ‘ನನ್ನ ಪ್ರಕಾರ ಮುರಳಿ ವಿಜಯ್ ಜತೆಗೆ ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು. ಶಿಖರ್ ಧವನ್ ಏಕದಿನ ಪಂದ್ಯದಲ್ಲಿ ಉತ್ತಮ ಲಹರಿಯಲ್ಲಿದ್ದರು. ಆದರೆ ಟೆಸ್ಟ್ ಕ್ರಿಕೆಟ್ ಗೆ ಬಂದರೆ ಅವರು ವಿದೇಶದಲ್ಲಿ ಉತ್ತಮ ದಾಖಲೆ ಮಾಡಿಲ್ಲ’ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. ಏಕದಿನ ಪಂದ್ಯದಲ್ಲೂ ಕೆಎಲ್ ರಾಹುಲ್ ರನ್ನು ಆಡಿಸದೇ ಇದ್ದಾಗ ಗಂಗೂಲಿ ಮೂರನೇ ಕ್ರಮಾಂಕದಲ್ಲಿ ಕರ್ನಾಟಕ ಮೂಲದ ಬ್ಯಾಟ್ಸ್ ಮನ್ ಗೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.