Webdunia - Bharat's app for daily news and videos

Install App

ಬಾಯ್ ಫ್ರೆಂಡ್ ಜೊತೆ ಸ್ಮೃತಿ ಮಂಧಾನ ವಿಶೇಷ ದಿನ: ಹೊಟ್ಟೆ ಉರಿಸಬೇಡಿ ಎಂದ ಫ್ಯಾನ್ಸ್

Krishnaveni K
ಸೋಮವಾರ, 8 ಜುಲೈ 2024 (15:08 IST)
ಮುಂಬೈ: ಆರ್ ಸಿಬಿ ನಾಯಕಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಗಾಯಕ ಪಾಲಾಶ್ ಮುಚ್ಚಲ್ ನಡುವಿನ ಪ್ರೇಮ ಸಂಬಂಧ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ದಿನದ ಫೋಟೋ ಹಂಚಿಕೊಂಡಿದ್ದು ನೆಟ್ಟಿಗರು ನಮ್ಮ ಹೊಟ್ಟೆ ಉರಿಸಬೇಡಿ ಎಂದಿದ್ದಾರೆ.

ಪಾಲಾಶ್ ಮುಚ್ಚಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸ್ಮೃತಿ ಜೊತೆಗೆ ಕೇಕ್ ಕಟಿಂಗ್ ಮಾಡುವ ಸುಂದರ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಸ್ಮೃತಿಯನ್ನು ತಬ್ಬಿಕೊಂಡು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ನಂಬರ್ 5 ಎಂದು ಅಡಿಬರಹ ಬರೆದಿದ್ದಾರೆ.

ಈ ಮೂಲಕ ತಮ್ಮಿಬ್ಬರ ಸಂಬಂಧಕ್ಕೆ 5 ವರ್ಷವಾಗಿದೆ ಎಂದು ಸಾರಿದ್ದಾರೆ. ಇದೇ ಖುಷಿಗೆ ಈ ಜೋಡಿ ಜೀವ ಕೇಕ್ ಕಟ್ ಮಾಡಿಕೊಂಡು ಸಂಭ್ರಮಿಸಿದೆ. ಇವರಿಬ್ಬರ ರೊಮ್ಯಾಂಟಿಕ್ ಫೋಟೋ ನೋಡಿ ನೆಟ್ಟಿಗರು ಉರಿದುಕೊಂಡಿದ್ದಾರೆ. ಸ್ಮೃತಿ ವಿಶ್ವ ಮಹಿಳಾ ಕ್ರಿಕೆಟಿಗರ ಪೈಕಿ ಮೋಸ್ಟ್ ಬ್ಯೂಟಿಫುಲ್ ಕ್ರಿಕೆಟ್ ಆಟಗಾರ್ತಿ. ಈಕೆಯ ಆಟದಷ್ಟೇ ಸೌಂದರ್ಯಕ್ಕೆ ಬೌಲ್ಡ್ ಆದವರು ಎಷ್ಟೋ ಮಂದಿ. ಈಕೆ ಮಹಿಳಾ ಕ್ರಿಕೆಟ್ ರಂಗದ ಕ್ರಶ್.

ಆದರೆ ಸ್ಮೃತಿಗೆ ಬಾಯ್ ಫ್ರೆಂಡ್ ಇರುವ ವಿಚಾರ ಇತ್ತೀಚೆಗೆ ಡಬ್ಲ್ಯುಪಿಎಲ್ ಟೂರ್ನಿ ವೇಳೆ ಬಹಿರಂಗವಾಗಿತ್ತು. ಆಗಲೇ ಅಭಿಮಾನಿಗಳ ಎದೆಯೊಡೆದು ಹೋಗಿತ್ತು. ಇದೀಗ ಪದೇ ಪದೇ ಸ್ಮೃತಿ ಮತ್ತು ಪಾಲಾಶ್ ತಮ್ಮ ಕಪಲ್ ಫೋಟೋ ಹಾಕುವುದನ್ನು ನೋಡಿ ಫ್ಯಾನ್ಸ್ ಮತ್ತಷ್ಟು ಉರಿದುಕೊಂಡಿದ್ದಾರೆ. ನೀವು ಮದುವೆಯಾಗುವುದಿದ್ದರೆ ಬೇಗ ಮದುವೆಯಾಗಿ. ಇಂತಹ ಫೋಟೋಗಳನ್ನು ಹಾಕಿ ನಮ್ಮ ಹೊಟ್ಟೆ ಉರಿಸಬೇಡಿ ಎಂದು ಅಲವತ್ತುಗೈದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

IND vs ENG: ಆ ಒಂದು ಯಾರ್ಕರ್ ಮೊಹಮ್ಮದ್ ಸಿರಾಜ್ ಜೀವನದಲ್ಲೇ ಮರೆಯಲ್ಲ: video

IND vs ENG: ಗೌತಮ್ ಗಂಭೀರ್ ಗೆ ಅಹಂ ಜಾಸ್ತಿಯಾಯ್ತು, ಇಲ್ಲಾಂದ್ರೆ ಹೀಗೆ ಮಾಡ್ತಿದ್ರಾ

ಕಣ್ಣು ಕುಕ್ಕಿದ ಇಂಗ್ಲೆಂಡ್ ಪ್ರೇಕ್ಷಕನ ಕೆಂಪು ಟೀ ಶರ್ಟ್‌, ಕ್ರೀಸ್‌ನಲ್ಲಿದ್ದ ಜಡೇಜಾ ಮಾಡಿದ್ದೇನು ಗೊತ್ತಾ

ಕೆಣಕಿದ ಕ್ರಾಲಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್‌ ಸಿರಾಜ್‌: ಕುತೂಹಲಕರ ಘಟ್ಟದತ್ತ ಐದನೇ ಟೆಸ್ಟ್‌

ಮುಂದಿನ ಸುದ್ದಿ
Show comments