Select Your Language

Notifications

webdunia
webdunia
webdunia
webdunia

ಡಬ್ಲ್ಲುಪಿಎಲ್: ಕನ್ನಡದಲ್ಲೇ ಬರೆದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಸ್ಮೃತಿ ಮಂಧಾನ

Smriti Mandhana
ದೆಹಲಿ: ಡಬ್ಲ್ಲುಪಿಎಲ್ ಫೈನಲ್ ಗೆದ್ದು ಇತಿಹಾಸ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮೊದಲ ಗೆಲುವಿನ ಖುಷಿಯಲ್ಲಿದೆ. ನಾಯಕಿ ಸ್ಮೃತಿ ಮಂಧಾನ ನಿನ್ನೆಯೇ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು.

ಗೆಲುವಿನ ಸಂಭ್ರಮದಲ್ಲಿ ಮಾತನಾಡಿದ್ದ ಸ್ಮೃತಿ ಮಂಧಾನ ಆರ್ ಸಿಬಿಯ ವಿಧೇಯ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದರು. ಕೊನೆಯಲ್ಲಿ ಕನ್ನಡದಲ್ಲೇ ಈ ಸಲ ಕಪ್ ನಮ್ದೇ ಅಲ್ಲ ಈ ಸಲ ಕಪ್ ನಮ್ದು ಎನ್ನುವ ಮೂಲಕ ಕನ್ನಡಿಗರಿಗೆ ಧನ್ಯವಾದ ಸಲ್ಲಿಸಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ಸ್ಮೃತಿ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಕನ್ನಡಾಭಿಮಾನ ಮೆರೆದಿದ್ದಾರೆ. ಇನ್ ಸ್ಟಾಗ್ರಾಂ ಪುಟದಲ್ಲೂ ಕನ್ನಡದಲ್ಲೇ ಈ ಸಲ ಕಪ್ ನಮ್ದು ಎಂದು ಬರೆದು ಧನ್ಯವಾದ ಸಲ್ಲಿಸಿದ್ದಾರೆ. ಸ್ಮೃತಿ ಕನ್ನಡದಲ್ಲೇ ಬರೆದಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ನೀಡಿದೆ.

ನೀವು ನಮ್ಮ ಮನಸ್ಸು ಗೆದ್ದುಬಿಟ್ರಿ ಎಂದು ಅಭಿಮಾನಿಗಳು ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ನೀವು ಸೂಪರ್, ಇನ್ಮೇಲೆ ಪುರುಷರ ಸರದಿ. ಅವರೂ ಈ ಸಲ ಕಪ್ ನಮ್ಮದೇ ಮಾಡಲಿ ಎಂದು ಶುಭ ಹಾರೈಸಿದ್ದಾರೆ. ಬಹುತೇಕರು ಕ್ವೀನ್ ಸ್ಮೃತಿಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಂದ ‘ಕಿಂಗ್’ ವಿರಾಟ್ ಕೊಹ್ಲಿ