Select Your Language

Notifications

webdunia
webdunia
webdunia
webdunia

ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಭಾರತದ ಸ್ಮೃತಿ ಮಂಥನಾ

ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಭಾರತದ ಸ್ಮೃತಿ ಮಂಥನಾ
ದುಬೈ , ಸೋಮವಾರ, 24 ಜನವರಿ 2022 (16:47 IST)
ದುಬೈ: 2021 ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಭಾರತದ ಮಹಿಳಾ ತಾರೆ ಸ್ಮೃತಿ ಮಂಥನಾ ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

22 ಅಂತಾರಾಷ್ಟ್ರೀಯ ಪಂದ್ಯಗಳಾಡಿ ಈ ವರ್ಷ 855 ರನ್ ಸಂಪಾದಿಸಿರುವ ಸ್ಮೃತಿ ಈ ವರ್ಷದ ಆಟಗಾರ್ತಿ ಪ್ರಶಸ್ತಿ ಗೌರವ ಸಂಪಾದಿಸಿದ್ದಾರೆ. ಇನ್ನು, ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಶಾಹಿನ್ ಅಫ‍್ರಿದಿ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಪಾಕ್ ನಾಯಕ ಬಾಬರ್ ಅಜಮ್ ಏಕದಿನ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇನ್ನು, ಪುರುಷರ ವಿಭಾಗದಲ್ಲಿ ವರ್ಷದ ಟೆಸ್ಟ್ ಆಟಗಾರ ವಿಭಾಗದಲ್ಲಿ ಜೋ ರೂಟ್, ಕೈಲ್ ಜೆಮಿಸನ್, ಕರುಣರತ್ನೆ ಜೊತೆಗೆ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಳಿದಂತೆ ಯಾವುದೇ ಭಾರತೀಯ ಆಟಗಾರರೂ ಪ್ರಶಸ್ತಿ ಪಡೆದಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022 ಗೆ ಇಂಗ್ಲೆಂಡ್ ನ ಈ ಸ್ಟಾರ್ ಆಟಗಾರರು ಗೈರು