Webdunia - Bharat's app for daily news and videos

Install App

ಎಲ್ಲೇ ಹೋದ್ರೂ ಈ ಸಲ ಕಪ್ ನಮ್ದೇ ಅಂತಾರೆ: ಆರ್ ಸಿಬಿ ಕ್ವೀನ್ ಸ್ಮೃತಿ ಮಂಧನಾ

Krishnaveni K
ಸೋಮವಾರ, 19 ಫೆಬ್ರವರಿ 2024 (13:35 IST)
Photo Courtesy: Twitter
ಬೆಂಗಳೂರು: ಮಹಿಳೆಯರ ಐಪಿಎಲ್ ಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಇದೀಗ  ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ನೀಡಿದ ಹೇಳಿಕೆಯೊಂದು ವೈರಲ್ ಆಗುತ್ತಿದೆ.

ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಸಂದರ್ಶನವೊಂದರಲ್ಲಿ ಇಲ್ಲಿನ ಅಪ್ಪಟ ಅಭಿಮಾನಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಹುಶಃ ಐಪಿಎಲ್ ನಲ್ಲಿ ಅತೀ ಹೆಚ್ಚು ವಿಧೇಯ ಅಭಿಮಾನಿಗಳನ್ನು ಹೊಂದಿರುವ ತಂಡ ಎಂದಿದ್ದರೆ ಅದು ಆರ್ ಸಿಬಿ. ತಂಡ ಸೋಲಲಿ, ಗೆಲ್ಲಲಿ ಬೆಂಬಲ, ನಿಷ್ಠೆ ಹೊಂದಿರುವ ಅಭಿಮಾನಿಗಳು ಆರ್ ಸಿಬಿಗಿದ್ದಾರೆ.

ಇದೀಗ ಸ್ಮೃತಿ ಮಂಧನಾ ಅಭಿಮಾನಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿ ನಾಯಕಿಯಾಗಿರುವ ಸ್ಮೃತಿಗೆ ವಿದೇಶಕ್ಕೆ ಹೋದರೂ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಚಿಯರ್ ಮಾಡುತ್ತಾರಂತೆ. ಸಂದರ್ಶನವೊಂದರಲ್ಲಿ ಇದನ್ನು ಸ್ಮೃತಿ ಹೇಳಿಕೊಂಡಿದ್ದಾರೆ.

ನಮಗೆ ಕಪ್ ಗೆಲ್ಲಲು ಸಾಧ‍್ಯವಾಗುತ್ತದೋ ಬಿಡುತ್ತೋ. ಆದರೆ ಅಭಿಮಾನಿಗಳು ಮಾತ್ರ ಎಲ್ಲೇ ಹೋದರೂ ಈ ಸಲ ಕಪ್ ನಮ್ದೇ ಅಂತಿರ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದರೂ ಅಲ್ಲಿ ಈ ಸಲ ಕಪ್ ನಮ್ದೇ ಎಂದು ಚಿಯರ್ ಮಾಡುವ ಒಬ್ಬರಾದರೂ ಅಭಿಮಾನಿಗಳು ಇದ್ದೇ ಇರುತ್ತಾರೆ ಎಂದು ಸ್ಮೃತಿ ಹೇಳಿಕೊಂಡಿದ್ದಾರೆ.

ಕಳೆದ ಬಾರಿ ಚೊಚ್ಚಲ ಡಬ್ಲ್ಯುಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ಹೀನಾಯ ಸೋಲು ಕಂಡಿತ್ತು. ದುಬಾರಿ ಬೆಲೆಗೆ ಖರೀದಿ ಮಾಡಿ ನಾಯಕತ್ವ ನೀಡಿದ್ದ ಸ್ಮೃತಿ ಬ್ಯಾಟಿಂಗ್ ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದರು. ಹಾಗಿದ್ದರೂ ಘಟಾನುಘಟಿಗಳನ್ನು ಹೊಂದಿರುವ ಆರ್ ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಫೆಬ್ರವರಿ 23 ರಿಂದ ಮಹಿಳೆಯರ  ಐಪಿಎಲ್ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಸ್ಪಷ್ಟನೆ ಕೇಳಿದ ಬೆನ್ನಲ್ಲೇ ಐಪಿಎಲ್‌ಗೆ ರವಿಚಂದ್ರನ್‌ ಅಶ್ವಿನ್ ಗುಡ್‌ಬೈ

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ಮುಂದಿನ ಸುದ್ದಿ
Show comments