Webdunia - Bharat's app for daily news and videos

Install App

ಕಾರು ಏರಲು ಹೊರಟ ಶ್ರೇಯಸ್ ಅಯ್ಯರ್ ಬಳಿ ದುಡ್ಡಿಗೆ ಬೇಡಿಕೆಯಿಟ್ಟ ಭಿಕ್ಷುಕಿ: ಅಯ್ಯರ್ ಮಾಡಿದ್ದೇನು ನೋಡಿ

Krishnaveni K
ಬುಧವಾರ, 21 ಆಗಸ್ಟ್ 2024 (11:24 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕಾರು ಏರಲು ಹೊರಟಾಗ ಭಿಕ್ಷುಕಿಯೊಬ್ಬಳು ಅವರಿಗೆ ಮುತ್ತಿಗೆ ಹಾಕಿದ್ದು, ದುಡ್ಡಿಗಾಗಿ ಬೇಡಿಕೆಯಿಟ್ಟಿದ್ದಾಳೆ. ಇದಕ್ಕೆ ಅಯ್ಯರ್ ಪ್ರತಿಕ್ರಿಯೆ ಏನಿತ್ತು ನೋಡಿ.

ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವಿನಲ್ಲಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ತಮ್ಮ ತವರು ಮುಂಬೈನಲ್ಲಿ ಶಾಪಿಂಗ್ ಗೆಂದು ಬಂದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು ಹೊರಗೆ ಕಾಣಿಸಿಕೊಂಡರೆ ಅವರ ಬಳಿ ಆಟೋಗ್ರಾಫ್, ಸೆಲ್ಫೀಗಾಗಿ ಜನ ಮುಗಿಬೀಳುವುದು ಹೊಸದೇನಲ್ಲ. ಅದೇ ರೀತಿ ಶ್ರೇಯಸ್ ಕೂಡಾ ಶಾಪಿಂಗ್ ಮುಗಿಸಿ ಇನ್ನೇನು ಕಾರು ಏರಬೇಕು ಎನ್ನುವಾಗ ಕೆಲವೊಂದು ಜನ ಅವರನ್ನು ಮುತ್ತಿಕೊಂಡಿದ್ದಾರೆ.

ಈ ಪೈಕಿ ಓರ್ವ ಭಿಕ್ಷುಕಿ ಮಹಿಳೆ ಮತ್ತು ಆಕೆಯ ಜೊತೆ ಒಬ್ಬ ಬಾಲಕನೂ ಇದ್ದರು. ಶ್ರೇಯಸ್ ಕಾರು ಏರಲು ಹೊರಟಾಗ ಮಹಿಳೆ ಶ್ರೇಯಸ್ ಕೈ ಮುಟ್ಟಿ ಏನಾದರೂ ಕೊಡಿ ಎಂದು ಅಂಗಲಾಚುತ್ತಾಳೆ. ಮಹಿಳೆಯ ವರ್ತನೆಯಿಂದ ಕೊಂಚ ಗಲಿಬಿಲಿಗೊಳಗಾದ ಶ್ರೇಯಸ್, ‘ಸ್ವಲ್ಪ ತಡಿ ಕೊಡ್ತೀನಿ’ ಎಂದು ಕೊಂಚ ಗರಂ ಆಗಿಯೇ ಹೇಳಿ ಕಾರಿನಲ್ಲಿ ಕೂರುತ್ತಾರೆ.

ಬಳಿಕ ತಮ್ಮ ಡ್ರೈವರ್ ಬಳಿಯಿಂದ ಸ್ವಲ್ಪ ಹಣ ಪಡೆದು ಮಹಿಳೆಗೆ ನೀಡುತ್ತಾರೆ. ಈ ವಿಡಿಯೋ ನೋಡಿದ ಕೆಲವರು ಆ ಬಡ ಮಹಿಳೆ ಮುಟ್ಟಿದ್ದಕ್ಕೆ ಶ್ರೇಯಸ್ ದುರುಗುಟ್ಟಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಹೆಚ್ಚಿನವರು ಶ್ರೇಯಸ್ ವರ್ತನೆ ಸರಿಯಾಗಿಯೇ ಇದೆ. ಆಕೆಯ ಬಡತನಕ್ಕೆ ಶ್ರೇಯಸ್ ಕಾರಣವಲ್ಲ, ಹಾಗಿದ್ದರೂ ಅವರು ಹಣ ಕೊಡಬೇಕು ಎಂದು ಆಕೆ ಮುಗಿಬೀಳುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

IPL 2025: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಫೀಲ್ಡಿಂಗ್‌ ಆಯ್ಕೆ: ಯಾರಿಗೆ ಸಿಗುತ್ತೆ ಪ್ಲೇ ಆಫ್‌ ಟಿಕೆಟ್‌

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

ಮುಂದಿನ ಸುದ್ದಿ
Show comments