Shreyas Iyer: ಶ್ರೇಯಸ್ ಅಯ್ಯರ್ ಐಪಿಎಲ್ ನ ಯಶಸ್ವೀ ನಾಯಕ ಎನ್ನುವುದಕ್ಕೆ ಇದೇ ಸಾಕ್ಷಿ

Krishnaveni K
ಸೋಮವಾರ, 2 ಜೂನ್ 2025 (11:26 IST)
ಅಹಮ್ಮದಾಬಾದ್: ಐಪಿಎಲ್ ನಲ್ಲಿ ಶ್ರೇಯಸ್ ಅಯ್ಯರ್ ಕೂಡಾ ಯಶಸ್ವೀ ನಾಯಕ ಎಂದು ಎನಿಸಿಕೊಂಡಿರುವುದಕ್ಕೆ ಇದೇ ಸಾಕ್ಷಿ. ಏನದು ಇಲ್ಲಿದೆ ಅಂಕಿ ಅಂಶ.

ಈ ಬಾರಿ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಇದೇ ಮೊದಲ ಬಾರಿಗೆ ತಂಡವನ್ನು ಫೈನಲ್ ಗೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಇದಕ್ಕೆ ಮೊದಲು ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕರಾಗಿ ಚಾಂಪಿಯನ್ ಮಾಡಿದ್ದರು.

ಹೀಗಾಗಿ ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆ ಭಾರೀ ಹೊಗಳಿಕೆ ವ್ಯಕ್ತವಾಗುತ್ತಿದೆ. ಅವರು ಟೀಂ ಇಂಡಿಯಾ ನಾಯಕತ್ವಕ್ಕೂ ಅರ್ಹರು ಎಂಬ ಮಾತು ಕೇಳಿಬರುತ್ತಿದೆ. ಆದರೆ ಟೀಂ ಇಂಡಿಯಾದಲ್ಲಿ ಮಾತ್ರ ಅವರಿಗೆ ಇನ್ನೂ ಸ್ಥಿರವಾದ ಸ್ಥಾನ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ.

ಕೇವಲ ಕಳೆದ ಎರಡು ಆವೃತ್ತಿಗಳಲ್ಲಿ ಮಾತ್ರವಲ್ಲ. ಶ್ರೇಯಸ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೂ ಮುನ್ನಡೆಸಿದ್ದರು. ಶ್ರೇಯಸ್ ನಾಯಕರಾಗಿದ್ದಾಗ ಡೆಲ್ಲಿ ಒಮ್ಮೆ ಏಳು ವರ್ಷಗಳ ನಂತರ ಪ್ಲೇ ಆಫ್ ಹಂತಕ್ಕೇರಿತ್ತು. ಇನ್ನೊಮ್ಮೆ ಮೊದಲ ಬಾರಿಗೆ ಫೈನಲ್ ಗೇರಿದ ಸಾಧನೆ ಮಾಡಿತ್ತು.

ಹೀಗಾಗಿ ಶ್ರೇಯಸ್ ಗೆ ಇದು ನಾಲ್ಕನೆಯ ಐಪಿಎಲ್. ಮಾತ್ರವಲ್ಲ, ಏನೂ ಅಲ್ಲದ ತಂಡಗಳನ್ನು ನಾಯಕರಾಗಿ ಮೂರನೇ ಬಾರಿಗೆ ಫೈನಲ್ ಗೇರಿಸಿದ ಸಾಧನೆ ಅವರದ್ದು. ಹೀಗಾಗಿಯೇ ಅವರು ಐಪಿಎಲ್ ನ ಯಶಸ್ವೀ ಕ್ಯಾಪ್ಟನ್ ಎಂದು ನಿಸ್ಸಂಶಯವಾಗಿ  ಹೇಳಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments