Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನವೇ ಶ್ರೇಯಾಂಕ ಪಾಟೀಲ್ ಗೆ ಜೀವ ಬಾಯಿಗೆ ಬಂದಂತಾಯಿತು (Video)

Shreyanka Patil

Krishnaveni K

ಬೆಂಗಳೂರು , ಗುರುವಾರ, 1 ಆಗಸ್ಟ್ 2024 (09:31 IST)
ಬೆಂಗಳೂರು: ಕನ್ನಡತಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಶ್ರೇಯಾಂಕ ಪಾಟೀಲ್ ಗೆ ಹುಟ್ಟುಹಬ್ಬದ ದಿನವೇ ಸಹ ಆಟಗಾರ್ತಿಯರಿಂದಾಗಿ ಜೀವ ಬಾಯಿಗೆ ಬಂದಂತಾಗಿತ್ತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶ್ರೇಯಾಂಕ ಪಾಟೀಲ್ ಗೆ ನಿನ್ನೆ ಜನ್ಮದಿನವಾಗಿತ್ತು. ಈ ವೇಳೆ ಅವರಿಗೆ ಹುಟ್ಟುಹಬ್ಬಕ್ಕೆ ಸಹ ಆಟಗಾರ್ತಿಯರು ಶುಭ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕಿದ್ದರು. ಅದೇ ರೀತಿ ಹಿರಿಯ ಆಟಗಾರ್ತಿ ಸ್ಮೃತಿ ಮಂದಾನಾ ಕೂಡಾ ಶ್ರೇಯಾಂಕಗೆ ವಿಶ್ ಮಾಡಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.

ಈ ವಿಡಿಯೋದಲ್ಲಿ ಶ್ರೇಯಾಂಕ ಕೊಠಡಿಯಲ್ಲಿ ಒಬ್ಬರೇ ಇದ್ದಾಗ ಕಪಾಟಿನ ಬಾಗಿಲು ತೆಗೆದು ಏನೋ ವಸ್ತು ತೆಗೆಯಲು ಹೋಗುತ್ತಾರೆ. ಆಗ ಥಟ್ಟನೆ ಕಪಾಟಿನೊಳಗಿನಿಂದ ಜೋರಾಗಿ ಕರ್ಕಶ ಸ್ವರದಲ್ಲಿ ಒಬ್ಬರು ಕಿರುಚುತ್ತಾರೆ. ಇದ್ದಕ್ಕಿದ್ದಂತೆ ಈ ಸೌಂಡ್ ಕೇಳಿ ಭಯಗೊಂಡ ಶ್ರೇಯಾಂಕ ಆಘಾತದಿಂದ ಕಿರುಚಿ ಕೆಳಗೇ ಬಿದ್ದು ಬಿಡುತ್ತಾರೆ.

ಅಸಲಿಗೆ ಅವರನ್ನು ಪ್ರಾಂಕ್ ಮಾಡಿದವರು ಜೆಮಿಮಾ ರೊಡ್ರಿಗಸ್. ಭಾರತ ಮಹಿಳಾ ತಂಡದ ಚಿನಕುರುಳಿ ಆಟಗಾರ್ತಿ ಎಂದರೆ ಜೆಮಿಮಾ. ಸದಾ ಎಲ್ಲರನ್ನೂ ನಗಿಸುತ್ತಾ, ಹಾಡುತ್ತಾ ಮಜವಾಗಿ ಕಾಲ ಕಳೆಯುವ ಜೆಮಿಮಾ ಶ್ರೇಯಾಂಕರನ್ನು ಈ ರೀತಿ ಪ್ರಾಂಕ್ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಸ್ಮೃತಿ ತಮ್ಮ  ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ವಿಶ್ ಮಾಡಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅಂತೂ ಹುಟ್ಟುಹಬ್ಬ ದಿನವೇ ನೀವು ಅವರ ಜೀವ ಬಾಯಿಗೆ ಬರಿಸಿದಿರಿ. ಪಾಪ ಶ್ರೇಯಾಂಕ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಸ್ಮೃತಿ, ಜೆಮಿಮಾ ಮತ್ತು ಶ್ರೇಯಾಂಕ ನಡುವೆ ಉತ್ತಮ ಬಾಂಧವ್ಯವಿದೆ. ಅದಕ್ಕೆ ಈ ವಿಡಿಯೋ ಮತ್ತೊಮ್ಮೆ ಸಾಕ್ಷಿಯಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್ ಒಲಂಪಿಕ್ಸ್: ಮೂರನೇ ಪದಕದ ಮೇಲೆ ಕಣ್ಣಿಟ್ಟ ಮನು ಬಾಕರ್