Publish Date: Tue, 09 Oct 2018 (08:39 IST)
Updated Date: Tue, 09 Oct 2018 (08:40 IST)
ಕರಾಚಿ: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಚಿರಪರಿಚಿತರಾಗಿದ್ದ ಪಾಕ್ ವೇಗಿ ಶೊಯೇಬ್ ಅಖ್ತರ್ ತಮ್ಮನ್ನು ತಾವೇ ಕ್ರಿಕೆಟ್ ನ ಡಾನ್ ಎಂದು ಟ್ವಿಟರಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.
ತಾವು ಆಡುತ್ತಿದ್ದ ದಿನಗಳಲ್ಲಿ ಬೇರೆ ಬೇರೆ ದೇಶದ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ ಪರಿಯನ್ನು ಫೋಟೋ ಸಮೇತ ಪ್ರಕಟಿಸಿ ತಾವೇ ಕ್ರಿಕೆಟ್ ನ ಡಾನ್ ಎಂದು ಬರೆದುಕೊಂಡಿದ್ದ ಶೊಯೇಬ್ ಅಖ್ತರ್ ಗೆ ಅಭಿಮಾನಿಗಳು ವಿಡಿಯೋ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಅದರಲ್ಲೂ ವಿಶೇಷವಾಗಿ ಸಚಿನ್ ತೆಂಡುಲ್ಕರ್ ಸೆಂಚೂರಿಯನ್ ನಲ್ಲಿ ಶೊಯೇಬ್ ಅಖ್ತರ್ ಬೌಲಿಂಗ್ ನನ್ನು ಚೆಂಡಾಡಿದ ವಿಡಿಯೋ ಪ್ರಕಟಿಸಿದ ಅಭಿಮಾನಿಗಳು ನಿಜವಾದ ಡಾನ್ ಇಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.