Select Your Language

Notifications

webdunia
webdunia
webdunia
webdunia

ಉದ್ದೀಪನಾ ಮದ್ದು ಸೇವನೆ: 2 ವರ್ಷಗಳ ನಿಷೇಧದ ವಿರುದ್ಧ ಶರಪೋವಾ ಮೇಲ್ಮನವಿ

ಉದ್ದೀಪನಾ ಮದ್ದು ಸೇವನೆ: 2 ವರ್ಷಗಳ ನಿಷೇಧದ ವಿರುದ್ಧ ಶರಪೋವಾ ಮೇಲ್ಮನವಿ
ಲವಸಾನೆ , ಬುಧವಾರ, 15 ಜೂನ್ 2016 (17:34 IST)
ನಿಷೇಧಿತ ಉದ್ದೀಪನಾ ಮದ್ದು ಸೇವಿಸಿ 2 ವರ್ಷ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಐದು ಬಾರಿ ಗ್ರಾಂಡ್ ಸ್ಲಾಮ್ ಟೆನ್ನಿಸ್ ಚಾಂಪಿಯನ್ ಮಾರಿಯಾ ಶರಪೋವಾ ಕ್ರೀಡಾ ನ್ಯಾಯಾಲಯದಲ್ಲಿ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಸಂದರ್ಭದಲ್ಲಿ   ನಿಷೇಧಿತ ಉದ್ದೀಪನಾ ಮದ್ದು ಮೆಲ್ಡೋನಿಯಂ ಸೇವನೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ 29 ವರ್ಷದ ರಷ್ಯನ್ ಆಟಗಾರ್ತಿಗೆ ಅಂತಾರಾಷ್ಟ್ರೀಯ ಟೆನ್ನಿಸ್ ಒಕ್ಕೂಟವು  2 ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿತ್ತು. 
 
ಸಿಎಎಸ್‌ಗೆ ನೀಡಿದ ಮೇಲ್ಮನವಿಯಲ್ಲಿ ಶರಪೋವಾ ನ್ಯಾಯಮಂಡಳಿ 2 ವರ್ಷದ ಆ್ಯಂಟಿ ಡೋಪಿಂಗ್ ನಿಯಮದ ಉಲ್ಲಂಘನೆ ಹಿನ್ನಲೆಯಲ್ಲಿ 2 ವರ್ಷಗಳ ನಿಷೇಧವನ್ನು ರದ್ದುಮಾಡುವಂತೆ ಕೋರಿದ್ದರು.  ಈ ಕುರಿತು ಜುಲೈ 18ರೊಳಗೆ ತೀರ್ಪು ಹೊರಬೀಳಲಿದ್ದು, ಅವರ ನಿಷೇಧವನ್ನು ತೆರವು ಮಾಡಿದರೆ  ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಶಯವನ್ನು ಶರಪೋವಾ ಹೊಂದಿದ್ದಾರೆ. 
 
ಐಟಿಎಫ್ ತೀರ್ಪು ಕಠಿಣವಾಗಿದ್ದು, ಸ್ವತಂತ್ರ ನ್ಯಾಯಮಂಡಳಿಯು ತಾವು ಉದ್ದೇಶಪೂರ್ವಕವಾಗಿ ಆ್ಯಂಟಿ ಡೋಪಿಂಗ್ ನಿಯಮ ಉಲ್ಲಂಘಿಸಿಲ್ಲವೆಂದು ಪತ್ತೆಹಚ್ಚಿರುವುದಾಗಿ ತಿಳಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಹಾಕಿ: ದ. ಕೊರಿಯಾವನ್ನು 2-1ರಿಂದ ಸೋಲಿಸಿದ ಭಾರತ