ಆಸ್ಪತ್ರೆ ಸೇರಿರುವ ಶ್ರೀಲಂಕಾ ವೇಗಿ ಶಮಿಂಡಾ ಎರಂಗಾ ಅವರನ್ನು ಕಾನೂನುಬಾಹಿರ ಬೌಲಿಂಗ್ ಶೈಲಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ನಿಂದ ನಿಷೇಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ಐರ್ಲೆಂಡ್ ವಿರುದ್ಧ ಎರಡನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಹೃದಯಬಡಿತ ಏರಿಕೆಯಾಗಿದ್ದರಿಂದ ಅವರನ್ನು ಡಬ್ಲಿನ್ ಆಸ್ಪತ್ರೆಗೆ ಒಯ್ದ ಕೆಲವೇ ಗಂಟೆಗಳಲ್ಲಿ ಐಸಿಸಿ ಹೇಳಿಕೆ ಹೊರಬಿದ್ದಿದೆ.
ಶ್ರೀಲಂಕಾದ ಶಮಿಂಡಾ ಎರಂಗಾ ಬೌಲಿಂಗ್ ಶೈಲಿಯು ಅಕ್ರಮವೆಂದು ಸ್ವತಂತ್ರ ಅಂದಾಜು ಸಮಿತಿ ಪತ್ತೆಹಚ್ಚಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಹೇಳಿಕೆ ತಿಳಿಸಿದೆ.
ಶಮಿಂಡಾ ಎಲ್ಲಾ ಎಸೆತಗಳು ಬೌಲಿಂಗ್ ಮಿತಿಗಿಂತ 15 ಡಿಗ್ರಿ ಮಟ್ಟವನ್ನು ಮೀರಿರುವುದಾಗಿ ಅಂದಾಜು ಬಹಿರಂಗಮಾಡಿದೆ. ಜೂನ್ 6ರಂದು ಲೋಗ್‌ಬರೋನ ಐಸಿಸಿ ಮಾನ್ಯತೆಯ ಟೆಸ್ಟಿಂಗ್ ಕೇಂದ್ರದಲ್ಲಿ ಟೆಸ್ಟ್ ಮಾಡಿದ್ದಾಗಿ ಹೇಳಿಕೆ ತಿಳಿಸಿದೆ.
ಗುರುವಾರ 30 ವರ್ಷಗಳನ್ನು ಪೂರೈಸುವ ಎರಂಗಾ, ತಮ್ಮ ಬೌಲಿಂಗ್ ಶೈಲಿಯನ್ನು ಸುಧಾರಿಸಿಕೊಂಡು ಹೊಸ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಲು ಸಾಧ್ಯವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ