Select Your Language

Notifications

webdunia
webdunia
webdunia
webdunia

2ನೇ ಟಿ 20ಯಲ್ಲಿ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆ

india
ಹರಾರೆ , ಸೋಮವಾರ, 20 ಜೂನ್ 2016 (11:38 IST)
ಆರಂಭದ ಟಿ 20 ಪಂದ್ಯದಲ್ಲಿ ಸೋಲುವ ಮೂಲಕ ಆಘಾತ ಅನುಭವಿಸಿದ ಭಾರತ ತಂಡ ಚಿನಕುರುಳಿ ಜಿಂಬಾಬ್ವೆ ವಿರುದ್ಧ ಸ್ಪರ್ಧೆಯಲ್ಲಿ ಉಳಿಯಲು ಎರಡನೇ ಟಿ 20ಯಲ್ಲಿ ಗೆಲುವು ಗಳಿಸಲೇಬೇಕಾಗಿದೆ. ಭಾರತದ ಯುವ ಆಟಗಾರರು ಪ್ರವಾಸದಲ್ಲಿ ಅಗ್ನಿಪರೀಕ್ಷೆಗೆ ಗುರಿಯಾಗಿ ನಿರ್ಣಾಯಕ ಹಂತಗಳಲ್ಲಿ ತಪ್ಪೆಸಗಿ ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದಾರೆ.
 
 ಧೋನಿ ತಮ್ಮ ತಂಡಕ್ಕೆ ಕೊನೆಯ ಓವರಿನಲ್ಲಿ ಗೆಲುವು ತಂದುಕೊಡಲು ವಿಫಲರಾದರು. ಅಕ್ಸರ್ ಪಟೇಲ್ ಸಡಿಲ ಶಾಟ್ ಹೊಡೆಯಲು ಹೋಗಿ ಪ್ರವಾಸಿಗಳಿಗೆ ಗೆಲುವು ಕಠಿಣವಾಯಿತು. ಎರಡನೇ ಸಾಲಿನ ತಂಡವನ್ನು ತಂಡದ ಬೆಂಚ್ ಬಲ ಪರೀಕ್ಷೆಗೆ ಆಯ್ಕೆಮಾಡಲಾಗಿದ್ದು, ಯುವ ಆಟಗಾರರಿಗೆ ಪ್ರದರ್ಶನ ನೀಡಲು ಸೂಕ್ತ ವೇದಿಕೆಯಾಗಿತ್ತು.
 ಆದರೂ ಒತ್ತಡದಲ್ಲಿ ನಲುಗಿದ ಟೀಂ ಇಂಡಿಯಾ ಸರಣಿಯಲ್ಲಿ ಮೊದಲ ಬಾರಿಗೆ ಜಿಂಬಾಬ್ವೆಯ ಸವಾಲನ್ನು ಎದುರಿಸಿತು. ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನವನ್ನು ನೀಡಲು ವಿಫಲರಾದರೆ, ಬೌಲರುಗಳು ಕೂಡ ನಿರಾಶೆಗೊಳಿಸಿದರು. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ 2 ರನ್ ಅಂತರದಿಂದ ಜಿಂಬಾಬ್ವೆ ವಿರುದ್ಧ ಸೋತ ಭಾರತ