Select Your Language

Notifications

webdunia
webdunia
webdunia
webdunia

ಶಾಲೆಯ ಅಭಿವೃದ್ಧಿಗೆ ಎಂಪಿ ಫಂಡ್‌ನಿಂದ 76 ಲಕ್ಷ ಕೊಡುಗೆ ನೀಡಿದ ಸಚಿನ್

ಶಾಲೆಯ ಅಭಿವೃದ್ಧಿಗೆ ಎಂಪಿ ಫಂಡ್‌ನಿಂದ 76 ಲಕ್ಷ ಕೊಡುಗೆ ನೀಡಿದ ಸಚಿನ್
ನವದೆಹಲಿ: , ಮಂಗಳವಾರ, 14 ಜೂನ್ 2016 (13:53 IST)
ಭಾರತದ ಮಾಜಿ ಕ್ರಿಕೆಟರ್ ಮತ್ತು ಸಂಸದರಾಗಿರುವ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಮತ್ತು ಹೊರಗೆ ಕೂಡ ಲೆಜೆಂಡ್ ಆಗಿದ್ದಾರೆ. ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಸ್ವರ್ಣಮೊಯಿ ಸಸ್ಮಾಲ್ ಶಿಕ್ಷಾ ನಿಕೇತನ್ ಶಾಲೆಯ ಸಿಬ್ಬಂದಿ ತೆಂಡೂಲ್ಕರ್‌ಗೆ ಪತ್ರ ಬರೆದು ಹಣಕಾಸಿನ ನೆರವನ್ನು ಕೋರಿದ್ದರು. 
 
ತೆಂಡೂಲ್ಕರ್ ತಮ್ಮ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ 76 ಲಕ್ಷ ರೂ.ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡುವ ಮೂಲಕ ಹೃದಯವೈಶಾಲ್ಯತೆ ಮೆರೆದಿದ್ದಾರೆ. ಶಾಲೆಗೆ ಕಳೆದ ಹಣಕಾಸು ವರ್ಷದಲ್ಲಿ ಫಂಡ್ ಹಸ್ತಾಂತರಿಸಲಾಗಿದ್ದು, ಗ್ರಂಥಾಲಯ, ಪ್ರಯೋಗಶಾಲೆ ಮತ್ತು ಬಾಲಕಿಯರಿಗೆ ಕಾಮನ್ ರೂಂ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.
 
ಶಾಲೆ ಈಗ ಬ್ಯಾಟಿಂಗ್ ಮಾಸ್ಟರ್ ಅವರನ್ನು ನೂತನವಾಗಿ ನಿರ್ಮಿಸಿದ ಸೌಲಭ್ಯಗಳ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಲು ಯೋಜಿಸಿದೆ ಎಂದು ಶಾಲೆಯ ಪ್ರಾಂಶುಪಾಲ ಉತ್ತಮಕುಮಾರ್ ಮೊಹಾಂತಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಬೆಲ್ಜಿಯಂಗೆ ಸೋತ ಭಾರತ