Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ತೀರ್ಪಿನಿಂದ ಬಿಸಿಸಿಐಗೆ ವಾರ್ಷಿಕ 1600 ಕೋಟಿ ಉಳಿತಾಯವಾಗಿದ್ದು ಹೇಗೆ ?

ಸುಪ್ರೀಂಕೋರ್ಟ್ ತೀರ್ಪಿನಿಂದ ಬಿಸಿಸಿಐಗೆ  ವಾರ್ಷಿಕ 1600 ಕೋಟಿ ಉಳಿತಾಯವಾಗಿದ್ದು ಹೇಗೆ ?
ನವದೆಹಲಿ: , ಮಂಗಳವಾರ, 19 ಜುಲೈ 2016 (15:17 IST)
ಲೋಧಾ ಸಮಿತಿಯ ಬಹುತೇಕ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ನಡುವೆ, ಪಂದ್ಯಗಳ ನಡುವೆ ಜಾಹಿರಾತು ಪ್ರಸಾರ ನಿಷೇಧಿಸಬೇಕೆಂಬ ಸಮಿತಿಯ ಶಿಫಾರಸಿಗೆ ಸುಪ್ರೀಂಕೋರ್ಟ್ ಮನ್ನಣೆ ನೀಡಿಲ್ಲವಾದ್ದರಿಂದ ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಜಾಹಿರಾತು ಮೂಲಕ ವಾರ್ಷಿಕ 1600 ಕೋಟಿ ಲಾಭ ಕ್ರಿಕೆಟ್ ಮಂಡಳಿಗೆ ಸಿಗುತ್ತಿದ್ದು, ಜಾಹಿರಾತು ನಿಷೇಧಿಸಬೇಕೆಂಬ ಲೋಧಾ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ತರುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಿತ್ತು.

 ಹೀಗಾಗಿ ಕೋರ್ಟ್ ತೀರ್ಪಿನಿಂದ ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಬಿಸಿಸಿಐ ಸುಧಾರಣೆ ಕುರಿತು ಲೋಧಾ ಶಿಫಾರಸುಗಳ ಪೈಕಿ ಓವರುಗಳ ಮಧ್ಯೆ ಜಾಹಿರಾತು ನಿಷೇಧಿಸಬೇಕೆಂಬ ಶಿಫಾರಸನ್ನು ಬಿಸಿಸಿಐ ಅಧಿಕಾರಿಗಳು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದರು.
 
ಕ್ರೀಡಾಭಿಮಾನಿಗಳು ಯಾವುದೇ ಅಡೆ ತಡೆಯಿಲ್ಲದೇ ಪಂದ್ಯಗಳನ್ನು ವೀಕ್ಷಿಸಲು ಜಾಹಿರಾತುಗಳಿಗೆ ನಿಷೇಧ ವಿಧಿಸುವಂತೆ ಲೋಧಾ ಸಮಿತಿಯು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಎಲ್ಲಾ ಕೋನಗಳಿಂದ ವಿಷಯ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುವುದನ್ನು ಬಿಸಿಸಿಐಗೆ ಬಿಡುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೋಧಾ ಸಮಿತಿ ಶಿಫಾರಸು ಅನುಷ್ಠಾನಕ್ಕೆ ಬಿಸಿಸಿಐ ಅಂಗಳದಲ್ಲಿ ಚೆಂಡು: ಗೋಯಲ್