Publish Date: Thu, 14 Nov 2024 (09:16 IST)
Updated Date: Thu, 14 Nov 2024 (09:19 IST)
ಸೆಂಚೂರಿಯನ್: ಇತ್ತೀಚೆಗೆ ಟಿ20 ಕ್ರಿಕೆಟ್ ನಲ್ಲಿ ಸತತ ಎರಡು ಶತಕ ಸಿಡಿಸಿ ಮಿಂಚಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಶೂನ್ಯ ಸಂಪಾದನೆ ಮಾಡಿದ ಕುಖ್ಯಾತಿಗೊಳಗಾಗಿದ್ದಾರೆ. ಇದಾದ ಬಳಿಕ ಅವರನ್ನು ಈಗ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.
ಸಂಜು ಸ್ಯಾಮ್ಸನ್ ರನ್ನು ತಂಡದಿಂದ ಕಿತ್ತು ಹಾಕಿದರೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಅವರ ಪರವಾಗಿ ಅಭಿಯಾನವನ್ನೇ ನಡೆಸುತ್ತಾರೆ. ಇತ್ತೀಚೆಗೆ ಸಂಜು ಎರಡು ಸತತ ಶತಕಗಳನ್ನು ಸಿಡಿಸಿದ ಬಳಿಕ ಭಾವುಕರಾಗಿದ್ದ ಅವರ ತಂದೆ ನನ್ನ ಮಗನ 10 ವರ್ಷದ ವೃತ್ತಿ ಬದುಕನ್ನು ಹಾಳು ಮಾಡಿದರು ಎಂದು ಧೋನಿ, ವಿರಾಟ್, ರೋಹಿತ್ ರಂತಹ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಇದೀಗ ನಿನ್ನೆಯ ದ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಶೂನ್ಯ ಸುತ್ತಿದಾಗ ನೆಟ್ಟಿಗರು ಅವರ ತಂದೆಯ ಇದೇ ಮಾತನ್ನು ನೆನೆಸಿಕೊಂಡು ಟ್ರೋಲ್ ಮಾಡಿದ್ದಾರೆ. ಕೇವಲ ಫ್ಲ್ಯಾಟ್ ವಿಕೆಟ್ ನಲ್ಲಿ ಮಾತ್ರ ಸಂಜು ಅಬ್ಬರಿಸುತ್ತಾರೆ. ಬೌನ್ಸಿ ಪಿಚ್ ನಲ್ಲಿ ಆಡಲು ಬರಲ್ಲ.
ಸಾಕಷ್ಟು ಅವಕಾಶ ಕೊಟ್ಟರೂ ಆಡಲ್ಲ. ಸತತವಾಗಿ ಶೂನ್ಯ ಸುತ್ತುವುದನ್ನು ನೋಡಿದರೆ ಇವರ ಬ್ಯಾಟಿಂಗ್ ಎಂಥದ್ದ ಎಂದು ಗೊತ್ತಾಗುತ್ತದೆ. ಇದಕ್ಕೇ ಅವರಿಗೆ ಧೋನಿ, ಕೊಹ್ಲಿ, ರೋಹಿತ್ ರಂತಹ ನಾಯಕರು ಅವಕಾಶ ನೀಡಲಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.