ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರಾಹುಲ್ ದ್ರಾವಿಡ್ ಗೆ ಸುಳ್ಳು ಹೇಳಿ ಎಂಟ್ರಿ ಪಡೆದಿದ್ದ ಸಂಜು ಸ್ಯಾಮ್ಸನ್

Krishnaveni K
ಸೋಮವಾರ, 6 ಮೇ 2024 (10:16 IST)
ಜೈಪುರ: ಐಪಿಎಲ್ ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವೀ ನಾಯಕನಾಗಿರುವ ಸಂಜು ಸ್ಯಾಮ್ಸನ್ ತಂಡದಲ್ಲಿ ಸುಳ್ಳು ಹೇಳಿ ಸ್ಥಾನ ಗಿಟ್ಟಿಸಿಕೊಂಡಿದ್ದರಂತೆ. ಈ ವಿಚಾರವನ್ನು ಅವರೀಗ ಬಯಲು ಮಾಡಿದ್ದಾರೆ.

2009 ರಲ್ಲಿ ರಾಜಸ್ಥಾನ್ ತಂಡ ಸಂಜು ಸ್ಯಾಮ್ಸನ್ ರನ್ನು ಖರೀದಿ ಮಾಡಿತ್ತು. ಆದರೆ ಬಳಿಕ 2013 ರಲ್ಲಿ ಅವರು ಕೋಲ್ಕೊತ್ತಾ ನೈಟ್ ರೈಡರ್ಸ್ ಪಾಲಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಮರು ವರ್ಷವೇ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿತ್ತು.

ಆಗ ರಾಜಸ್ಥಾನ್ ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸುತ್ತಿದ್ದರು. ಕೇರಳ ಮೂಲದ ವೇಗಿ ಶ್ರೀಶಾಂತ್ ಕೂಡಾ ತಂಡದ ಭಾಗವಾಗಿದ್ದರು. ಕೆಕೆಆರ್ ಮತ್ತು ರಾಜಸ್ಥಾನ್‍ ನಡುವಿನ ಪಂದ್ಯಕ್ಕೆ ಮೊದಲು ಒಮ್ಮೆ ಹೋಟೆಲ್ ಆವರಣದಲ್ಲಿ ತಿರುಗಾಡುತ್ತಿದ್ದ ಸ್ಯಾಮ್ಸನ್ ರನ್ನು ಕರೆದು ದ್ರಾವಿಡ್ ಗೆ ಶ್ರೀಶಾಂತ್ ಪರಿಚಯ ಮಾಡಿಕೊಟ್ಟಿದ್ದರು.

ಈತ ಕೇರಳ ಮೂಲದವರು. ಲೋಕಲ್ ಟೂರ್ನಮೆಂಟ್ ನಲ್ಲಿ ಈತ ಆರು ಬಾಲ್ ನಲ್ಲಿ ಆರು ಸಿಕ್ಸರ್ ಸಿಡಿಸಿದ್ದಾನೆ. ಭಾರೀ ಟ್ಯಾಲೆಂಟೆಡ್ ಹುಡುಗ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು. ದ್ರಾವಿಡ್ ಗೂ ಇದನ್ನು ಕೇಳಿ ಇಂಪ್ರೆಸ್ ಆಗಿತ್ತು. ಹೀಗಾಗಿ ಸಂಜು ನಂತರ ಆರ್ ಆರ್ ತಂಡಕ್ಕೆ ಸೇರಿದರು. ಹೀಗೆ ಸುಳ್ಳು ಹೇಳಿಕೊಂಡೇ ತಾನು ರಾಜಸ್ಥಾನ್ ತಂಡ ಸೇರಿರುವುದಾಗಿ ಸಂಜು ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

IND vs SA: ಟೀಂ ಇಂಡಿಯಾಕ್ಕೆ ಟೆಸ್ಟ್ ನಲ್ಲಿ ತವರಿನಲ್ಲೇ ಇಂಥಾ ಸ್ಥಿತಿ ಯಾವತ್ತೂ ಇರಲಿಲ್ಲ

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

ಮುಂದಿನ ಸುದ್ದಿ
Show comments