Select Your Language

Notifications

webdunia
webdunia
webdunia
webdunia

ಗಂಡನಿಗಾಗಿ ಸ್ವಂತ ಕೆರಿಯರ್ ತ್ಯಾಗ ಮಾಡಿದ್ದ ಸಂಜು ಸ್ಯಾಮ್ಸನ್ ಪತ್ನಿ

Sanju Samson
Photo Courtesy: Twitter
ಜೈಪುರ: ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಮಿಂಚುತ್ತಿರುವ ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಪತ್ನಿ ಚಾರುಲತಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.

ಕೇರಳದ ವಾಹಿನಿಯೊಂದರ ಸಂದರ್ಶನದಲ್ಲಿ ಸಂಜು ಸ್ಯಾಮ್ಸನ್ ತಮ್ಮ ಪತ್ನಿಯ ತ್ಯಾಗ ಬಗ್ಗೆ ಹೇಳಿಕೊಂಡಿದ್ದರು. ಚಾರುಲತಾ ಓದುತ್ತಿದ್ದಾಗಲೇ ಮದುವೆಯಾಗಿತ್ತು. ಓದು ಮುಗಿದ ಬಳಿಕ ತನಗಾಗಿ ವೃತ್ತಿ ಜೀವನವನ್ನು ಮರೆತು ತ್ಯಾಗ ಮಾಡಿದ್ದಾಳೆ ಎಂದು ಪತ್ನಿ ಬಗ್ಗೆ ಸಂಜು ಸ್ಯಾಮ್ಸನ್ ಹೇಳಿಕೊಂಡಿದ್ದಾರೆ.

ಚಾರುಲತಾರನ್ನು ಸಂಜು ಮದುವೆಯಾಗಿದ್ದು 2018 ರಲ್ಲಿ. ಸಂಜು ಪತ್ನಿ ಯಾವ ಸಿನಿಮಾ ನಟಿಗೂ ಕಮ್ಮಿಯಿಲ್ಲದಂತಹ ರೂಪಸಿ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಂಜು ತೀವ್ರ ಮುಂಗೋಪಿಯಾಗಿದ್ದರು. ಆದರೆ ಮದುವೆ ಬಳಿಕ ಅವರ ಜೀವನಕ್ಕೆ ಹೊಸ ತಿರುವು ತಂದಿದ್ದು ಚಾರುಲತಾ.

ಪತ್ನಿ ಚಾರುಲತಾ ಕೆಮಿಸ್ಟ್ರಿ ಪದವೀಧರೆ. ಆದರೆ ಮದುವೆಗೆ ಮುನ್ನವೇ ಇಬ್ಬರಲ್ಲಿ ಒಬ್ಬರು ಕುಟುಂಬದ ಕಡೆಗೆ ಗಮನ ಕೊಡಬೇಕು ಎಂದು ತೀರ್ಮಾನಿಸಿದ್ದೆವು. ಅದರಂತೆ ನನಗೆ ಕ್ರಿಕೆಟ್ ಆಡಲು ಇಷ್ಟವಾಗಿರುವುದರಿಂದ ಚಾರು ನನಗೋಸ್ಕರ ಆಕೆಯ ವೃತ್ತಿ ಜೀವನವನ್ನು ತ್ಯಾಗ ಮಾಡಿದ್ದಳು. ನಾನು ಎಲ್ಲೇ ಪ್ರವಾಸ ಹೋಗುವಾಗಲೂ ಆಕೆ ಜೊತೆಗಿರುತ್ತಾಳೆ. ಕೆಲವೊಮ್ಮೆ ಅವಳಿಗೆ ನನ್ನ ಜೊತೆಗಿರುವಾಗ ಎಷ್ಟು ಬೋರ್ ಆಗುತ್ತದೆ ಎಂದು ನನಗೆ ಗೊತ್ತು. ಹೊರಗೆ ಹೋಗಲೂ ಸಾಧ‍್ಯವಾಗದ ಪರಿಸ್ಥಿತಿಯಿರುತ್ತದೆ. ಆಗಲೂ ಆಕೆ ನನ್ನ ಜೊತೆಗೇ ಇರುತ್ತಾಳೆ.

ತನ್ನ ಪತ್ನಿ ಹಿಂದೊಮ್ಮೆ ನೀಡಿದ ವಾಚ್ ನ್ನು ಸಂಜು ಸದಾ ತೊಟ್ಟುಕೊಳ್ಳುತ್ತಾರೆ. ಅಸಲಿಗೆ ಈ ವಾಚ್ ಓಡುತ್ತಲೇ ಇಲ್ಲ. ಹಾಗಿದ್ದರೂ ಆಕೆ ಪ್ರೀತಿಯಿಂದ ನೀಡಿದ ಗಿಫ್ಟ್ ಎನ್ನುವ ಕಾರಣಕ್ಕೆ ಅದನ್ನು ತೊಟ್ಟುಕೊಳ್ಳುತ್ತಾರಂತೆ. ನನ್ನ ಜೀವನದ ಎಲ್ಲಾ ಯಶಸ್ಸಿನ ಕ್ರೆಡಿಟ್ ನಲ್ಲಿ ಅವಳ ಪಾಲಿದೆ ಎಂದು ಸಂಜು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಆರ್ ಸಿಬಿ ಹೀಗೆ ಮಾಡಬೇಕು