Publish Date: Thu, 27 Jul 2023 (09:30 IST)
Updated Date: Thu, 27 Jul 2023 (09:42 IST)
ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಇದುವರೆಗೆ ಇಬ್ಬರ ನಡುವಿನ ಪೈಪೋಟಿಯಲ್ಲಿ ಹೆಚ್ಚು ಮೇಲುಗೈ ಸಾಧಿಸಿದ್ದು ಇಶಾನ್ ಕಿಶನ್. ಇಬ್ಬರ ನಡುವೆ ಆಯ್ಕೆ ಮಾಡಬೇಕೆಂದಾದಾಗ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇಶಾನ್ ಗೆ ಮಣೆ ಹಾಕಿದ್ದೇ ಹೆಚ್ಚು. ಸಂಜು ತಂಡಕ್ಕೆ ಆಯ್ಕೆಯಾದರೂ ಹೆಚ್ಚಾಗಿ ಆಡುವ ಬಳಗದಲ್ಲಿ ಸ್ಥಾನ ಸಿಗುವುದೇ ಇಲ್ಲ.
ಇದು ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದು ಇದೆ. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಿದೆ. ಆದರೆ ಇಶಾನ್ ಆರಂಭಿಕ ಸ್ಥಾನಕ್ಕೆ ಸೂಕ್ತ. ಸಂಜು ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲರು. ಹೀಗಾಗಿ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸಂಜುಗೇ ಅವಕಾಶ ನೀಡಬೇಕು ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಒತ್ತಾಯಿಸಿದ್ದಾರೆ.