ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ಕುಸ್ತಿಪಟು ನರಸಿಂಗ ಯಾದವ್ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ ಸುದ್ದಿ ಹೊರಬಿದ್ದ ಮೇಲೆ ತಾನು ನಿರ್ದೋಷಿ ಎಂದು ರಾವ್ ಹೇಳುತ್ತಿದ್ದರು. ಆದರೆ ಹೊಸ ಬೆಳವಣಿಯೊಂದರಲ್ಲಿ ನರಸಿಂಗ್ ಯಾದವ್ ರೂಂಮೇಟ್ ಸಂದೀಪ್ ಯಾದವ್‌ಗೆ ಕೂಡ ನಿಷೇಧಿತ ವಸ್ತುವಿನ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.
ಭಾರತದ ಕ್ರೀಡಾಪ್ರಾಧಿಕಾರ ಸೋನೆಪತ್ ಕೇಂದ್ರದಲ್ಲಿ ರೂಂಮೇಟ್‌ಗಳಾಗಿರುವ ಇಬ್ಬರೂ ರಾಷ್ಟ್ರೀಯ ಡೋಪಿಂಗ್ ಏಜನ್ಸಿ ಆಯೋಜಿಸಿದ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗಳಲ್ಲಿ ವಿಫಲರಾಗಿದ್ದಾರೆ.
ನರಸಿಂಗ್ ಯಾದವ್ ದೇಶವನ್ನು ಪ್ರತಿನಿಧಿಸುವ ಕನಸು ನುಚ್ಚುನೂರಾಗಿದೆ. ಆದರೆ ಸಂದೀಪ್ ರಿಯೊ ಒಲಿಂಪಿಕ್ಸ್‌ಗೆ ತೆರಳುವ ತಂಡದಲ್ಲಿರಲಿಲ್ಲ.
ಇಬ್ಬರೂ ಕುಸ್ತಿಪಟುಗಳಿಗೆ ಅನಾಬೊಲಿಕ್ ಸ್ಟಿರಾಯ್ಡ್ ಮೆಥಾನ್‌ಡಿಯೊನೋನ್‌ಗೆ ಪಾಸಿಟಿವ್ ಫಲಿತಾಂಶ ಬಂದಿದೆ.
ನರಸಿಂಗ್ ಯಾದವ್ ದೋಷಿ ಎಂದು ಸಾಬೀತಾದರೆ ಭಾರತಕ್ಕೆ ದೊಡ್ಡ ಪೆಟ್ಟು ಬೀಳಲಿದ್ದು, 74 ಕೆಜಿ ವಿಭಾಗದಲ್ಲಿ ಇನ್ನೊಬ್ಬ ಕುಸ್ತಿಪಟುವಿನಿಂದ ಅವರನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಅಥ್ಲೀಟ್‌ಗಳ ಅಂತಿಮ ಪಟ್ಟಿ ಕಳಿಸಲು ಕೊನೆಯ ದಿನಾಂಕ ಜುಲೈ 18.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.