ಆರ್. ಅಶ್ವಿನ್ ಅವರು ಇದುವರೆಗೆ ಶ್ರೇಷ್ಟ ಟೆಸ್ಟ್ ಸಾಧನೆ ಮಾಡಿದ್ದಾರೆ. 33 ಟೆಸ್ಟ್‌ಗಳಲ್ಲಿ 180 ವಿಕೆಟ್ ಮತ್ತು 1300 ರನ್. 33 ರಷ್ಟು ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿ 25. ಇವೆಲ್ಲಾ ಅಂಕಿಅಂಶಗಳು ಅಶ್ವಿನ್ ಅವರನ್ನು ಭಾರತ ತಂಡದಲ್ಲಿ ಅದ್ಭುತ ಆಲ್‌ರೌಂಡರ್ ಎಂದು ತೋರಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಒಂದೂ ವಿಕೆಟ್ ಕಬಳಿಸದಿದ್ದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಮನೋಜ್ಞ ಪ್ರದರ್ಶನ ನೀಡಿ 7 ವಿಕೆಟ್ ಕಬಳಿಸಿದರು. ಅಶ್ವಿನ್ ಟೆಸ್ಟ್‌ನಲ್ಲಿ 5 ವಿಕೆಟ್ ಗಳಿಸಿದ್ದು ಒಟ್ಟು 17 ಬಾರಿ. ಅನಿಲ್ ಕುಂಬ್ಳೆ 35 ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ಅವರ ಹಿಂದೆಯೇ ಹರ್ಭಜನ್ 25 ಮತ್ತು ಕಪಿಲ್ ದೇವ್ 23 ಬಾರಿ ಐದು ವಿಕೆಟ್ ಕಬಳಿಸಿದ್ದಾರೆ.
ಉಪಖಂಡದ ಹೊರಗೆ ಮೊದಲ ಬಾರಿಗೆ ಐದು ವಿಕೆಟ್ ಗಳಿಕೆ. ಹಿಂದಿನ ಬಾರಿ ಅವರು ಉಪಖಂಡದ ಹೊರಗೆ ಆಸ್ಟ್ರೇಲಿಯಾದಲ್ಲಿ 105ಕ್ಕೆ 4 ವಿಕೆಟ್ ಕಬಳಿಸಿದ್ದರು.
ಭಾರತದ ಕ್ರಿಕೆಟರ್ ಇನ್ನಿಂಗ್ಸ್‌ವೊಂದರಲ್ಲಿ ಶತಕ ಸಿಡಿಸಿ ಐದು ವಿಕೆಟ್ ಗಳಿಸಿದ್ದು 2 ಬಾರಿ. ಆರ್. ಅಶ್ವಿನ್ ಈ ಸಾಧನೆಯನ್ನು ಎರಡು ಬಾರಿ ಮಾಡಿದ್ದಾರೆ.
ಈ ಸಾಧನೆ ಮಾಡಿದ ಇನ್ನೊಬ್ಬ ಭಾರತೀಯ ಪಾಲಿ ಉಮ್ರೀಗರ್. ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಬಾರಿಯೂ ಈ ಸಾಧನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಅಶ್ವಿನ್ 3 ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ ಮೂರು ಬಾರಿ 5 ವಿಕೆಟ್ ಕಬಳಿಸಿದ್ದರೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಬಾರಿ ಐದು ವಿಕೆಟ್ ಕಬಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.