Select Your Language

Notifications

webdunia
webdunia
webdunia
webdunia

ಸಚಿನ್, ಗಂಗೂಲಿ, ಲಕ್ಷ್ಮಣ್‌ರಿಂದ ಟೀಂ ಇಂಡಿಯಾ ಹೆಡ್ ಕೋಚ್ ಆಯ್ಕೆ

ಸಚಿನ್, ಗಂಗೂಲಿ, ಲಕ್ಷ್ಮಣ್‌ರಿಂದ ಟೀಂ ಇಂಡಿಯಾ ಹೆಡ್ ಕೋಚ್ ಆಯ್ಕೆ
ನವದೆಹಲಿ , ಗುರುವಾರ, 16 ಜೂನ್ 2016 (11:19 IST)
ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ಆಯ್ಕೆಗೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ತ್ರಯರ ಸಮಿತಿ ರಚನೆಯಾಗಿದೆ. ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಕ್ರಿಕೆಟರ್ ಸಂಜಯ್ ಜಗದಾಲೆ ಈ ಸಮಿತಿಯ ಮುಖ್ಯ ಸಮನ್ವಯಕರಾಗಿದ್ದಾರೆ.

ಹೆಡ್ ಕೋಚ್ ಹುದ್ದೆಗೆ 57 ಅರ್ಜಿದಾರರ ಪೈಕಿ 21 ಅಭ್ಯರ್ಥಿಗಳನ್ನು ಬಿಸಿಸಿಐ ಪಟ್ಟಿ ಮಾಡಿದೆ. ಈ 21 ಮಂದಿ ಬಿಸಿಸಿಐ ಅರ್ಹತೆ ಮಾನದಂಡವನ್ನು ಪೂರೈಸಿದ್ದಾರೆ. ತೆಂಡೂಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಜೂನ್ 22ರಂದು ವರದಿ ಸಲ್ಲಿಸಲಿದ್ದಾರೆ.  ಮಂಡಳಿಯು ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ತನ್ನ ಪ್ರಕಟಣೆಯನ್ನು ನೀಡುವ ನಿರೀಕ್ಷೆಯಿದೆ.
 
 ಹೊಸ ಕೋಚ್ ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಈ ಮಧ್ಯೆ, ಸಂಜಯ್ ಬಂಗಾರ್ ಜಿಂಬಾಬ್ವೆಯಲ್ಲಿ ಪ್ರಸಕ್ತ ಏಕದಿನ ಸರಣಿಗೆ ಪರ್ಯಾಯ ಕೋಚ್ ಆಗಿದ್ದಾರೆ.  ಉನ್ನತ ಹುದ್ದೆಗೆ ಅತೀ ಗಣ್ಯ ಅಭ್ಯರ್ಥಿಗಳಿದ್ದು, ಮಾಜಿ ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ಇನ್ನೊಂದು ಅವಧಿಗಾಗಿ ಎದುರುನೋಡುತ್ತಿದ್ದು, ಸಂದೀಪ್ ಪಾಟೀಲ್ ಮತ್ತು ಅನಿಲ್ ಕುಂಬ್ಳೆಯಿಂದ ಪೈಪೋಟಿ ಎದುರಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಪಾ ಅಮೆರಿಕಾ: ಬ್ರೆಜಿಲ್ ಸೋಲಿನಿಂದ ಕೋಚ್ ಡುಂಗಾ ವಜಾ